ADVERTISEMENT

ಮಾರ್ಗ ಇಲ್ಲವಯ್ಯಾ ಪಾದಚಾರಿಗೆ

ರಾಹುಲ ಬೆಳಗಲಿ
Published 2 ಏಪ್ರಿಲ್ 2012, 8:25 IST
Last Updated 2 ಏಪ್ರಿಲ್ 2012, 8:25 IST

ಚಿಕ್ಕಬಳ್ಳಾಪುರ:  ನಗರದಲ್ಲಿ ಅಚ್ಚುಕಟ್ಟಾದ ಪಾದ ಚಾರಿ ಮಾರ್ಗ ನಿರ್ಮಿಸಲಾಗುತ್ತದೆ. ರಸ್ತೆ ನಿಯಮ ಪಾಲಿಸುವಂತೆ ಪಾದಚಾರಿಗಳಿಗೆ ಸೂಚನೆಯನ್ನೂ ಸಹ ನೀಡಲಾಗುತ್ತದೆ. ಈಗಾಗಲೇ ಪಾದಚಾರಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ ಯಾದರೂ ಅದು ಪಾದಚಾರಿಗಳಿಗಿಂತ ವಾಹನಗಳ ನಿಲುಗಡೆಗೆ ಹೆಚ್ಚು ಸದ್ಬಳಕೆ  !

ನಗರದ ಸರ್ಕಾರಿ ಜೂನಿಯರ್ ಕಾಲೇಜಿನ ಮುಂಭಾಗದಿಂದ ಪ್ರವಾಸಿ ಮಂದಿರದವರೆಗೆ  ಪಾದ ಚಾರಿ ಮಾರ್ಗವಿದೆ. ಸಣ್ಣಪುಟ್ಟ ಅಂಗ ಡಿಗಳು ಮತ್ತು ವ್ಯಾಪಾರಸ್ಥರು ಒತ್ತುವರಿ ಮಾಡಿ ಕೊಂ ಡರೂ ಪಾದಚಾರಿಗಳು ಅದರಲ್ಲೇ ನಡೆದಾಡುತ್ತಾರೆ. ಆದರೆ ಪ್ರವಾಸಿ ಮಂದಿರದಿಂದ ವಾಪಸಂದ್ರದವರೆಗೆ ಪಾದ ಚಾರಿ ಮಾರ್ಗ ಸಂಪೂರ್ಣವಾಗಿ ಅವ್ಯವಸ್ಥೆ ಯಿಂದ ಕೂಡಿದೆ.

ಇದರಿಂದ ಪಾದಚಾರಿಗಳು ರಸ್ತೆಯ ಮೇಲೆ ನಡೆದುಕೊಂಡು ಹೋಗಬೇಕು.  `ವಾಹನಗಳು ನಿಲ್ಲು ವುದರಿಂದ ಪಾದಚಾರಿಗಳು ರಸ್ತೆ ಯಲ್ಲೇ ನಡೆದು ಕೊಂಡು ಹೋಗಬೇಕು~ ಎನ್ನುತ್ತಾರೆ ವಾಪಸಂದ್ರದ ನಿವಾಸಿ ನಾರಾಯಣಾಚಾರಿ.

`ನಗರಸಭೆ ಮತ್ತು ಜಿಲ್ಲಾಡಳಿತ ಒಂದು ಕಡೆ ಮಾತ್ರ ವೇ ಪಾದಚಾರಿ ಮಾರ್ಗ ನಿರ್ಮಿಸಿದೆ ಹೊರತು ಮತ್ತೊಂದು ಕಡೆ ಗಮನವೇ ಹರಿಸಿಲ್ಲ. ಪ್ರವಾಸಿ ಮಂದಿ ರದಿಂದ ರಸ್ತೆಯ ಕೊನೆಯವರೆಗೆ ಇರುವ ಎರಡೂ ಬದಿಗಳ ಪಾದಚಾರಿ ಮಾರ್ಗಗಳಲ್ಲಿ ಸಿಮೆಂಟ್ ಕಲ್ಲು ಗಳನ್ನು ಅಳವಡಿಸುವ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಅಲ್ಲಿಯೇ ಪೊಲೀಸ್ ಅಧಿಕಾರಿಗಳ ಮತ್ತು ಇತರ ಅಧಿ ಕಾರಿಗಳ ಮನೆಗಳಿವೆ. ಆದರೆ ಯಾರೂ ಸಹ ಗಂಭೀರ ವಾಗಿ ಪರಿಗಣಿಸಿಲ್ಲ~ ಎಂದು ಹೇಳಿದರು.

`ಪಾದಚಾರಿ ಮಾರ್ಗವನ್ನು ಪಾದಚಾರಿಗಳಿಗೆ ಮುಕ್ತಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಶಿಕ್ಷಕಿ ಗೌರಮ್ಮ ತಿಳಿಸಿದರು. `ಬಾಡಿಗೆ ವಾಹನಗಳ ನಿಲುಗಡೆಗೆ ಪರ್ಯಾಯ ಸ್ಥಳವಿಲ್ಲ. ಪ್ರವಾಸಿ ಮಂದಿರದ ಸ್ಥಳದಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಾಣಗೊಳ್ಳಲಿದೆ~  ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.