ADVERTISEMENT

ಮೊಹರಂ ಆಚರಣೆ ಸಂಪನ್ನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2018, 14:33 IST
Last Updated 21 ಸೆಪ್ಟೆಂಬರ್ 2018, 14:33 IST
ನಗರದ ಗಂಗಮ್ಮಗುಡಿ ರಸ್ತೆಯ ಬಾಬಯ್ಯನ ಗುಡಿಯಲ್ಲಿ ಭಕ್ತರು ಪಾಂಜಾಗಳಿಗೆ ಪ್ರಾರ್ಥನೆ ಸಲ್ಲಿಸಿದರು.
ನಗರದ ಗಂಗಮ್ಮಗುಡಿ ರಸ್ತೆಯ ಬಾಬಯ್ಯನ ಗುಡಿಯಲ್ಲಿ ಭಕ್ತರು ಪಾಂಜಾಗಳಿಗೆ ಪ್ರಾರ್ಥನೆ ಸಲ್ಲಿಸಿದರು.   

ಚಿಕ್ಕಬಳ್ಳಾಪುರ: ನಗರದಲ್ಲಿ ಶುಕ್ರವಾರ ಶ್ರದ್ಧಾಭಕ್ತಿ, ಸಡಗರದಿಂದ ಮುಸ್ಲಿಮರು ಮೊಹರಂ ಆಚರಿಸಿದರು. ಪ್ರಮುಖ ರಸ್ತೆಗಳಲ್ಲಿ ವಾದ್ಯ ಮೇಳಗಳೊಂದಿಗೆ ಅಲಂಕೃತ ಪಾಂಜಾಗಳ ಮೆರವಣಿಗೆ ನಡೆಸಿ ಸಂಜೆ ವಿಸರ್ಜನೆ ಕಾರ್ಯದ ಮೂಲಕ ಹಬ್ಬ ಸಂಪನ್ನಗೊಂಡಿತು.

ನಗರದ ಗಂಗಮ್ಮಗುಡಿ ರಸ್ತೆ, ಎಂ.ಜಿ.ರಸ್ತೆ ಹಳೆ ಎಸ್ಪಿ ಕಚೇರಿ ಮುಂದೆ ಮತ್ತು ಕಂದವಾರದಲ್ಲಿ ಪಾಂಜಾಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಗಂಗಮ್ಮನ ಗುಡಿ ರಸ್ತೆಯ ಬಾಬಯ್ಯನ ಗುಡಿಯ ಮುಂದೆ ಅಗ್ನಿಕುಂಡದಲ್ಲಿ ಸೌದೆ ತುಂಡುಗಳು ಹಾಕಿ ಅಗ್ನಿ ಹಾಕಿ ಅಗ್ನಿ ಪ್ರವೇಶ ಮಾಡಲಾಯಿತು. ಭಕ್ತರು ಬಾಬಯ್ಯನ ಗುಡಿಯಲ್ಲಿ ಸಕ್ಕರೆ ಮತ್ತು ಕಡಲೆಪಪ್ಪು ಸಮರ್ಪಿಸಿ, ಪಾರ್ಥನೆ ಸಲ್ಲಿಸಿ ಪ್ರಸಾದವನ್ನು ಸ್ವೀಕರಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT