ADVERTISEMENT

ವಿದ್ಯಾರ್ಥಿಗಳತ್ತ ಆಕಾಂಕ್ಷಿಗಳ ಚಿತ್ತ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 9:45 IST
Last Updated 25 ಏಪ್ರಿಲ್ 2013, 9:45 IST

ಚಿಂತಾಮಣಿ: ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಮೀಪ ಪಕ್ಷೇತರ ಅಭ್ಯರ್ಥಿ ಡಾ.ಎಂ.ಸಿ.ಸುಧಾಕರ್ ಬೆಂಬಲಿಗರು ಬುಧವಾರ ವಿದ್ಯಾರ್ಥಿಗಳತ್ತ ತಮ್ಮ ಚಿತ್ತ ಹರಿಸಿದ್ದರು.

ಎಪಿಎಂಸಿ ಮಾಜಿ ನಿರ್ದೇಶಕ ಸಾದಲಿ ಶ್ರೀನಿವಾಸ್ ಮಾತನಾಡಿ, ಸುಧಾಕರ್ ವಿದ್ಯಾಭ್ಯಾಸ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಮಹಾತ್ಮ ಗಾಂಧಿ ಪ್ರೌಢಶಾಲೆ ಕಟ್ಟಡ ಯಾವುದೇ ಖಾಸಗಿ ಕಾಲೇಜಿಗಿಂತ ಕಡಿಮೆ ಇಲ್ಲ. ಮಹಿಳಾ ಕಾಲೇಜಿಗೆ ಮೊದಲ ಹಂತದಲ್ಲಿ ಒಂದು ಕೋಟಿ, ನಂತರ 2 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿಸಿದ್ದರು ಎಂದು ಹೇಳಿದರು.

ನಗರದಲ್ಲಿ ಅನೇಕ ಸಾಮರ್ಥ್ಯಸೌಧ ಸೇರಿದಂತೆ ಅನೇಕ ಕಾಮಗಾರಿಗಳು ಬಾಕಿ ಉಳಿದಿವೆ. ಎಲ್ಲ ಕಾಮಗಾರಿಗಳನ್ನು ಮುಗಿಸಲು ಮತ್ತೊಮ್ಮೆ ಡಾ.ಎಂ.ಸಿ.ಸುಧಾಕರ್‌ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಎಪಿಎಂಸಿ ನಿರ್ದೇಶಕ ಚಲಣ್ಣ, ನಗರಸಭೆ ಸದಸ್ಯ ಭಾಸ್ಕರ್, ಮುಖಂಡರಾದ ಬೂರಗಮಾಕಲಹಳ್ಳಿ ಮಂಜುನಾಥ್, ಸ್ವಾತಿ ಹರಿ, ಡಿಷ್ ಅಶ್ವತ್ಥರೆಡ್ಡಿ, ಕಳಾಯಿ ಶ್ರೀನಿವಾಸ್, ರಘುನಾಥಗೌಡ, ನಾಯ್ಡು ಸೀನಪ್ಪ, ವಿಜಯ್‌ಕುಮಾರ್, ಆಲವಾಟ ಎ.ಎಸ್.ಮಂಜುನಾಥ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.