ADVERTISEMENT

ಸಮಸ್ಯೆ ನಿವಾರಣೆಗೆ ಛಾಯಾಗ್ರಾಹಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 10:00 IST
Last Updated 2 ಜನವರಿ 2014, 10:00 IST

ಗೌರಿಬಿದನೂರು: ಛಾಯಾಗ್ರಾಹಕರು ವೃತ್ತಿಪರವಾಗಿ ಅನೇಕ ಸಮಸ್ಯೆಗಳು ಎದುರಿಸುತ್ತಿದ್ದು, ಸರ್ಕಾರ ಸಹ ಛಾಯಾಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ತಾಲ್ಲೂಕು ಛಾಯಾಗ್ರಾಹಕರ ಸಂಘದ ನೂತನ ಅಧ್ಯಕ್ಷ ಜಿ.ಎ.ಪ್ರದೀಪ್ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ನದಿದಡ ಆಂಜನೇಯ­ಸ್ವಾಮಿ ದೇಗುಲದಲ್ಲಿ ತಾಲ್ಲೂಕು ಛಾಯಾಗ್ರಾಹಕರ ಸಂಘ ಮಂಗಳವಾರ ಏರ್ಪಡಿಸಿದ್ದ  ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಛಾಯಾ­ಗ್ರಾಹ­ಕರು ಆರ್ಥಿಕವಾಗಿ ಹಿಂದುಳಿ­ದಿದ್ದು, ಜೀವನ ನಡೆಸುವುದೇ ಕಷ್ಟ­ವಾಗಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ವೃತ್ತಿ ತೆರಿಗೆ ವಿಧಿಸಲು ಹೊರಟಿರು­ವುದು ಸರಿಯಲ್ಲ ಎಂದರು.

ವಿವಿಧ ಕಾಮಗಾರಿಗಳಿಗೆ ಛಾಯಾ­ಚಿತ್ರಗಳನ್ನು ತೆಗೆಯಲು ಮೊದಲು ಛಾಯಾಗ್ರಾಹಕರಿಗೆ ಅವಕಾಶವಿತ್ತು ಆದರೆ ಈಗ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳೇ ಡಿಜಿಟಲ್ ಕ್ಯಾಮೆರಾ ಇಟ್ಟುಕೊಂಡು ಕಾಮಗಾರಿಗಳ ಫೋಟೋ ತೆಗೆಯುವುದರಿಂದ ನಮಗೆ ಅವಕಾಶ ಇಲ್ಲದಂತಾಗಿದೆ ಎಂದರು.

ಉಪಾಧ್ಯಕ್ಷ ಧರಣೇಂದ್ರ ಜೈನ್ ಮಾತನಾಡಿ, ವಿವಿಧ ಕಾಮಗಾರಿಗಳ ಫೋಟೋ ತೆಗೆಯುವುದಕ್ಕೆ ಸ್ಥಳೀಯ ಛಾಯಾಗ್ರಾಹಕರಿಗೆ ಅವಕಾಶ ನೀಡಿ ಸಹಕರಿಸಬೇಕು ಎಂದರು.

ತಾಲ್ಲೂಕು ಛಾಯಾಗ್ರಾಹಕರ ಸಂಘಕ್ಕೆ ಪದಾಧಿ­ಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿ.ಎ.ಪ್ರದೀಪ್ (ಅಧ್ಯಕ್ಷ), ಧರಣೇಂದ್ರ ಜೈನ್ (ಉಪಾ­ಧ್ಯಕ್ಷ), ನಾಗರಾಜ್ (ಪ್ರಧಾನ ಕಾರ್ಯ­ದರ್ಶಿ), ಷೇಕ್ ವಾಲಿ (ಸಹ ಕಾರ್ಯ­ದರ್ಶಿ), ಚನ್ನೇ­ಗೌಡ (ಖಜಾಂಚಿ), ಸುಬ್ರಹ್ಮಣಿ, ಸುನೀಲ್ ಕುಮಾರ್ (ಸಂಚಾಲಕರು), ತಿಮ್ಮಪ್ಪ, ಲಕ್ಷ್ಮೀ­ನಾರಾಯಣ, ಮಂಜು­ನಾಥ್, ಪ್ರಭಾ­ಕರ ಗೌಡ, ಉಮಾ­ಶಂಕರ್, ಸತೀಶ್ ಕುಮಾರ್, ಜಯ­ರಾಮೇ­ಗೌಡ, ಸಮೀ­ಉಲ್ಲಾ, ಅಂಜಿನೇ­ಗೌಡ (ನಿರ್ದೇಶಕರು) ಅವಿರೋಧವಾಗಿ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT