ಚಿಕ್ಕಬಳ್ಳಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಶಾಸಕ ಡಾ. ಕೆ.ಸುಧಾಕರ್ ಮಾ.11ರಿಂದ 14ರವರೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಪಿ.ಶ್ರೀನಿವಾಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಾ.11ರ ಬೆಳಿಗ್ಗೆ 8ಕ್ಕೆ ನಂದಿ ದೇಗುಲದಿಂದ ಆರಂಭಗೊಳ್ಳುವ ಪಾದಯಾತ್ರೆ ರಾತ್ರಿ 8.15ಕ್ಕೆ ಹೊಸಹುಡ್ಯದಲ್ಲಿ ಕೊನೆಗೊಳ್ಳಲಿದೆ. 12ರಂದು ಹೊಸಹುಡ್ಯದಿಂದ ವಾಪಸಂದ್ರದವರೆಗೆ, 13ಕ್ಕೆ ವಾಪಸಂದ್ರದಿಂದ ಮಂಡಿಕಲ್ಲು ಮತ್ತು 14ಕ್ಕೆ ಕಾಡಚಿಕ್ಕನಹಳ್ಳಿಯಿಂದ ಕಾಮರೆಡ್ಡಿಹಳ್ಳಿಯವರೆಗೆ ಪಾದಯಾತ್ರೆ ನಡೆಯಲಿದೆ ಭಾನುವಾರ ತಿಳಿಸಿದರು.
ಕಾಂಗ್ರೆಸ್ ನಾಯಕರ ಸೂಚನೆಯ ಮೇರೆಗೆ ರಾಜ್ಯದಾದ್ಯಂತ ಈ ರೀತಿಯ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಮಟ್ಟದ ಯುವ ಕಾಂಗ್ರೆಸ್ ಸಮಾವೇಶವನ್ನು ಮಾ.15ರಂದು ದೇವನಹಳ್ಳಿಯಲ್ಲಿ ನಡೆಸಲಾಗುವುದು.
ಸಮಾವೇಶದಲ್ಲಿ ಸಚಿವ ಕೃಷ್ಣ ಬೈರೇಗೌಡ, ಶಾಸಕ ಸಂತೋಷ್ ಲಾಡ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕರ್ತರಾದ ಜಿಯಾಉಲ್ಲಾ, ಸಂತೋಷ್ರಾಜ್, ತಿರುಮಳಪ್ಪ, ನರಸಿಂಹಮೂರ್ತಿ, ಅರ್ಜುನ್, ಬಾಲು, ರಾಜೇಶ್, ಗಂಗರಾಜು, ಬಾಬಾಜಾನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.