ADVERTISEMENT

22 ಮಂದಿ ಅವಿರೋಧ ಆಯ್ಕೆ

ಬಾಗೇಪಲ್ಲಿ: 412 ಸ್ಥಾನಗಳಿಗೆ 1038 ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 1:53 IST
Last Updated 16 ಡಿಸೆಂಬರ್ 2020, 1:53 IST

ಬಾಗೇಪಲ್ಲಿ:ತಾಲ್ಲೂಕಿನ 25 ಗ್ರಾಮ ಪಂಚಾಯಿತಿಗಳ 402 ಸ್ಥಾನಗಳಿಗೆ, 1038 ಮಂದಿಅಭ್ಯರ್ಥಿಗಳು ಅಂತಿಮ ಕಣದಲ್ಲಿ ಇದ್ದಾರೆ. ಇದರಲ್ಲಿ 22 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆಗೆ 1495 ಮಂದಿಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದು, 26 ತಿರಸ್ಕೃತವಾಗಿವೆ. ತಾಲ್ಲೂಕಿನ 5 ಹೋಬಳಿಗಳಲ್ಲಿ 1,31,789 ಮತದಾರರ ಪೈಕಿ 65,719 ಪುರುಷರು, 66,038 ಮಹಿಳೆಯರು ಇದ್ದಾರೆ. ಮಿಲಿಟರಿಯಲ್ಲಿ 34 ಮಂದಿ ಮತದಾರರ ಪೈಕಿ 33 ಮಂದಿ ಪುರುಷರು, ಒಬ್ಬರು ಮಹಿಳೆ ಮತದಾರರು ಇದ್ದಾರೆ. ತಾಲ್ಲೂಕಿನ ಗ್ರಾಮ ಪಂಚಾಯಿತಿ ಚುನಾವಣೆಗೆ 231 ಮತಗಟ್ಟೆಗಳ ಪೈಕಿ 214 ಮತಗಟ್ಟೆಗಳು ಹಾಗೂ 17 ಆಕ್ಸಿಲರಿ ಮತಗಟ್ಟೆ ಕೇಂದ್ರಗಳನ್ನು ಮಾಡಲಾಗಿದೆ.

ತಾಲ್ಲೂಕಿನ ಗ್ರಾಮ ಪಂಚಾಯಿತಿಗಳು: ಘಂಟಂವಾರಿಪಲ್ಲಿ, ಪರಗೋಡು, ಕಾನಗಮಾಕಲಪಲ್ಲಿ, ಯಲ್ಲಂಪಲ್ಲಿ, ದೇವರಗುಡಿಪಲ್ಲಿ, ನಲ್ಲಪರೆಡ್ಡಿಪಲ್ಲಿ, ಗೂಳೂರು, ತಿಮ್ಮಂಪಲ್ಲಿ, ಮಾರ್ಗಾನುಕುಂಟೆ, ಕೊತ್ತಕೋಟೆ, ಗೊರ್ತಪಲ್ಲಿ, ತೋಳ್ಳಪಲ್ಲಿ, ಪಾತಪಾಳ್ಯ, ಮಿಟ್ಟೇಮರಿ, ಜೂಲಪಾಳ್ಯ, ಪಾಳ್ಯಕೆರೆ, ಸೋಮನಾಥಪುರ, ನಾರೇಮದ್ದೇಪಲ್ಲಿ, ಬಿಳ್ಳೂರು, ರಾಶ್ಚೆರವು, ಚಾಕವೇಲು, ಪುಲಗಲ್, ನಲ್ಲಗುಟ್ಲಪಲ್ಲಿ, ಚೇಳುರು, ಪೋಲನಾಯಕನಪಲ್ಲಿ.

ADVERTISEMENT

ಅಂತಿಮವಾಗಿ ಕಣದಲ್ಲಿ 1038ಅಭ್ಯರ್ಥಿಗಳ ಪೈಕಿ ಅನುಸೂಚಿತ ಜಾತಿ-310, ಅನುಸೂಚಿತ ಪಂಗಡ-191, ಹಿಂದುಳಿದ ವರ್ಗ ಅ-43, ಹಿಂದುಳಿದ ವರ್ಗ ಬಿ-5, ಸಾಮಾನ್ಯ-489 ಮಂದಿ ಇದ್ದಾರೆ. ತಾಲ್ಲೂಕಿನ ಹೋಬಳಿವಾರು ಕಸಬಾ ಹೋಬಳಿಯಲ್ಲಿ 44, ಪಾತಪಾಳ್ಯ-55, ಗೂಳೂರು-51, ಚೇಳುರು-56 ಹಾಗೂ ಮಿಟ್ಟೇಮರಿ ಹೋಬಳಿಯಲ್ಲಿ 25 ಮಂದಿಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಇದರಲ್ಲಿ 22 ಮಂದಿಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಾಲ್ಲೂಕಿನ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಸೂಕ್ಷ್ಮ-173, ಅತಿಸೂಕ್ಷ್ಮ-23, ಸಾಮಾನ್ಯ-173 ಮತಗಟ್ಟೆಗಳನ್ನು ಮಾಡಲಾಗಿದೆ. ಪಟ್ಟಣದಸರ್ಕಾರಿ ಬಾಲಕಿಯರ ಶಾಲಾ ಆವರಣದಲ್ಲಿ ಮಸ್ಟರಿಂಗ್ ಹಾಗೂ ಚುನಾವಣಾ ಎಣಿಕೆ ಕೇಂದ್ರವನ್ನು ಮಾಡಲಾಗಿದೆ. ಚುನಾವಣಾ ಕಾರ್ಯಕ್ಕೆ 1016 ಮಂದಿ ಸಿಬ್ಬಂದಿಯನ್ನು ಹಾಗೂ 41 ಬಸ್‌ಗಳನ್ನು ತೆಗೆದುಕೊಳ್ಳಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ 3 ಎಂಸಿಸಿ ತಂಡಗಳನ್ನು ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.