ADVERTISEMENT

ಗುಡಿಸಲಿಗೆ ಬೆಂಕಿ: 60 ಕುರಿ, 20 ಮೇಕೆ ಕರಕಲು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 4:08 IST
Last Updated 14 ಮಾರ್ಚ್ 2021, 4:08 IST
ಡಿ.ಪಾಳ್ಯ ಹೋಬಳಿಯ ‌ಪುಲಮಾಕಲಹಳ್ಳಿಯಲ್ಲಿ‌ ನಡೆದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಸುಟ್ಟು ಕರಕಲಾದ ಕುರಿಗಳು
ಡಿ.ಪಾಳ್ಯ ಹೋಬಳಿಯ ‌ಪುಲಮಾಕಲಹಳ್ಳಿಯಲ್ಲಿ‌ ನಡೆದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಸುಟ್ಟು ಕರಕಲಾದ ಕುರಿಗಳು   

ಗೌರಿಬಿದನೂರು: ತಾಲ್ಲೂಕಿನ ಡಿ.ಪಾಳ್ಯ ಹೋಬಳಿಯ ಪುಲಮಾಕಲಹಳ್ಳಿಯಲ್ಲಿ ಶನಿವಾರ ರಾತ್ರಿ ಗುಡಿಸಲಿಗೆ ಬಿದ್ದ ಆಕಸ್ಮಿಕ ಬೆಂಕಿಯಲ್ಲಿ ಸುಮಾರು 60ಕ್ಕೂ ಹೆಚ್ಚು ಕುರಿ, 20 ಮೇಕೆ ಮತ್ತು ನಾಲಕ್ಉ ಜಾನುವಾರು ಸುಟ್ಟು ಕರಕಲಾಗಿವೆ.

ಗಂಗಾಧರಪ್ಪ ಎಂಬ ರೈತನ ಹುಲ್ಲಿನ ಗುಡಿಸಲಿಗ ಬೆಂಕಿ ತಗುಲಿ, ಗುಡಿಸಲಿನ ಒಳಗಿದ್ದ 60 ಕ್ಕೂ ಹೆಚ್ಚು ಕುರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.ಪಕ್ಕದ ಗುಡಿಸಲಿನಲ್ಲಿದ್ದ ಅಶ್ವತ್ಥಪ್ಪ ಅವರಿಗೆ ಸೇರಿದ 20 ಮೇಕೆ ಕೂಡ ಬೆಂಕಿಗಾಹುತಿಯಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT