ADVERTISEMENT

ಚಿಕ್ಕಬಳ್ಳಾಪುರ: 30 ವಿದ್ಯಾರ್ಥಿಗಳಿಗೆ 625 ಅಂಕ

ರಾಜ್ಯದಲ್ಲಿ ಹೆಚ್ಚು ಪೂರ್ಣ ಅಂಕ ಪಡೆದ ವಿದ್ಯಾರ್ಥಿಗಳ ಜಿಲ್ಲೆ ಚಿಕ್ಕಬಳ್ಳಾಪುರ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 4:11 IST
Last Updated 10 ಆಗಸ್ಟ್ 2021, 4:11 IST
ಬೃಂದಾ
ಬೃಂದಾ   

ಚಿಕ್ಕಬಳ್ಳಾಪುರ: ಜಿಲ್ಲೆಯ 30 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದಿದ್ದಾರೆ. ರಾಜ್ಯದಲ್ಲಿ ಹೆಚ್ಚು ಪೂರ್ಣ ಅಂಕ ಪಡೆದ ವಿದ್ಯಾರ್ಥಿಗಳ ಜಿಲ್ಲೆ ಎನ್ನುವ ಹಿರಿಮೆಗೆ ಚಿಕ್ಕಬಳ್ಳಾಪುರ ಭಾಜನವಾಗಿದೆ.

ಬಾಗೇಪಲ್ಲಿ ತಾಲ್ಲೂಕಿನ ಒಬ್ಬರು, ಚಿಕ್ಕಬಳ್ಳಾಪುರ ತಾಲ್ಲೂಕಿನ ಹದಿನೇಳು, ಚಿಂತಾಮಣಿಯ ಇಬ್ಬರು, ಗೌರಿಬಿದನೂರು ತಾಲ್ಲೂಕಿನ ಇಬ್ಬರು ಹಾಗೂ ಶಿಡ್ಲಘಟ್ಟ ತಾಲ್ಲೂಕಿನ ಎಂಟು ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ.

ಬಾಗೇಪಲ್ಲಿ ಪಟ್ಟಣದ ಯಂಗ್ ಇಂಡಿಯಾ ಪ್ರೌಢಶಾಲೆಯ ಡಿ.ವಿ.ಚರಣ್‌ಗೌಡ, ಚಿಕ್ಕಬಳ್ಳಾಪುರ ಅಗಲಗುರ್ಕಿಯ ಬಿಜಿಎಸ್ ಪ್ರೌಢಶಾಲೆಯ ಸಿ.ಎ.ಬೃಂದಾ, ಎ.ದೀಪಿಕಾ, ಎಸ್.ದೀಪ್ತಿ, ವಿ.ಜಲಜ, ವಿ.ಕಾವ್ಯಶ್ರೀ, ಕೆ.ಕೀರ್ತನ, ಎನ್.ಕೃಪಾ, ಮೈತ್ರಿ ಎಸ್.ಕುಮಾರ್, ಬಿ.ಪಿ.ಮೋಹಿತ್, ಎಸ್.ಪ್ರಜ್ವಲ್, ಆರ್.ರಮಶ್ರೀ, ಎಸ್.ಸೃಷ್ಟಿ, ಎಸ್.ಸುಮಂತ್, ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಚನಬಲೆಯ ಬಿಜಿಎಸ್ ಪ್ರೌಢಶಾಲೆಯ ಜಿ.ಮಾನಸ, ಎನ್.ಜಯಶ್ರೀ,ಆರ್.ಶರ್ವಾಣಿ,ಜಿ.ವಿ.ವಿನಯ್ ಕುಮಾರ್ 625ಕ್ಕೆ 625 ಅಂಕ ಪಡೆದಿದ್ದಾರೆ.

ADVERTISEMENT

ಚಿಂತಾಮಣಿ ತಾಲ್ಲೂಕಿನ ಕೈವಾರದ ಬೈರವೇಶ್ವರ ಪ್ರೌಢಶಾಲೆಯ ಎಂ.ಲಿಖಿತಾ, ಚಿಂತಾಮಣಿಯ ಕಿಶೋರ ವಿದ್ಯಾಭವನದ ಕೆ.ಎನ್.ಉನ್ನತಿ, ಗೌರಿಬಿದನೂರು ಪಟ್ಟಣದ ಬಿಜಿಎಸ್ ಪ್ರೌಢಶಾಲೆಯ ಆರ್‌.ಕೆ.ಅಮೂಲ್ಯ‌, ಮೆಹೆಂತ್ ಸಾಯಿರೆಡ್ಡಿ, ಶಿಡ್ಲಘಟ್ಟ ಪಟ್ಟಣದ ಬಿಜಿಎಸ್ ಪ್ರೌಢಶಾಲೆಯ ಸಿ.ವಿ.ಅನನ್ಯ, ಟಿ.ಲಾವಣ್ಯ, ವಿ.ಲಾವ್ಯಶ್ರೀ, ಎಚ್‌.ಎಸ್.ನಿತ್ಯಶ್ರೀ, ಜಿ.ಎನ್.ಪ್ರೀತಂ, ವೈ.ಎಲ್.ತ್ರಿವೇಣಿ, ಡಿ.ಯಶಸ್ವಿನಿ, ಶಿಡ್ಲಘಟ್ಟದ ಕ್ರೆಸೆಂಟ್ ಪ್ರೌಢಶಾಲೆಯ ಡಿ.ನಂದನ್ ಕುಮಾರ್ 625ಕ್ಕೆ 625 ಅಂಕ ಪಡೆದಿದ್ದಾರೆ.

ಜಿಲ್ಲೆಯು ಶೇ 100ರಷ್ಟು ಫಲಿತಾಂಶ ಪಡೆದಿದೆ. 15,848 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲರೂ ಉತ್ತೀರ್ಣರಾಗಿದ್ದಾರೆ.

ಉತ್ತಮ ಸಾಧನೆಗೆ: ಜಿಲ್ಲೆಯಲ್ಲಿ 625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಅವರನ್ನು ಅಭಿನಂದಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

‌ರಾಜ್ಯದಲ್ಲಿ ಒಟ್ಟು 157 ವಿದ್ಯಾರ್ಥಿಗಳು ಪೂರ್ಣ ಅಂಕ ಪಡೆದಿದ್ದಾರೆ. ಇದರಲ್ಲಿ ಜಿಲ್ಲೆಯ ಸಾಧನೆ ಶೇ 19.10ರಷ್ಟಿದೆ. ಇದು ಸಂತಸದ ವಿಚಾರ ಎಂದಿದ್ದಾರೆ.

2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಜಿಲ್ಲೆಯು ಮೊದಲ ಸ್ಥಾನ ಪಡೆದಿತ್ತು. ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮಹತ್ತದ ಬದಲಾವಣೆ ಆಗಿದೆ. ಇದಕ್ಕೆ ಸಹಕಾರ ನೀಡಿದ ಶಿಕ್ಷಣ ಇಲಾಖೆ ಅಧಿಕಾರಿಗಳೂ, ಶಿಕ್ಷಕರು, ಜನಪ್ರತಿನಿಧಿಗಳಿಗೆಕೃತಜ್ಞತೆ ಸಲ್ಲಿಸುವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.