ADVERTISEMENT

ಚಿಂತಾಮಣಿ: ಧಾರಾಕಾರ ಮಳೆ ಮಧ್ಯೆ ಹಬ್ಬ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2022, 4:43 IST
Last Updated 2 ಸೆಪ್ಟೆಂಬರ್ 2022, 4:43 IST
ಚಿಂತಾಮಣಿಯ ವಿನೋಬಾ ಕಾಲೋನಿಯಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ
ಚಿಂತಾಮಣಿಯ ವಿನೋಬಾ ಕಾಲೋನಿಯಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ   

ಚಿಂತಾಮಣಿ: ನಗರ ಹಾಗೂ ತಾಲ್ಲೂಕಿನಾದ್ಯಂತ ಬುಧವಾರ ಗಣೇಶ ಹಬ್ಬವನ್ನು ಶ್ರದ್ಧಾ ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಹಗಲು-ರಾತ್ರಿಯೆನ್ನದೆ ಬಿಡದೆ ಸುರಿಯುತ್ತಿರುವ ಮಳೆಯಲ್ಲೇ ಗಣೇಶೋತ್ಸವ ಆಚರಣೆ ನಡೆಯಿತು.

ತಾಲ್ಲೂಕಿನಲ್ಲಿ ಕಳೆದೆರಡು ವರ್ಷಗಳಿಂದ ಉತ್ತಮ ಮಳೆ-ಬೆಳೆಯಾಗುತ್ತಿದೆ. ಕೆರೆ ಕುಂಟೆಗಳು ತುಂಬಿ ಕೃಷಿಕರಲ್ಲಿ ಸಂತಸ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಜನರು ಈ ವರ್ಷಶ್ರದ್ಧೆ ಮತ್ತು ಭಕ್ತಿಯಿಂದ ಹಬ್ಬ ಆಚರಿಸಲಾಯಿತು.

ಬುಧವಾರ ಜನರು ಹೊಸ ಉಡುಗೆಗಳನ್ನು ತೊಟ್ಟು ಸಂಭ್ರಮಿಸಿದರು. ಮನೆಗಳನ್ನು ಬೆಳಿಗ್ಗೆಯಿಂದಲೇ ಮಹಿಳೆಯರು ಸ್ವಚ್ಛಗೊಳಿಸಿ, ಮನೆಯ ಅಂಗಳ ಹಾಗೂ ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನು ಬಿಡಿಸಿದ್ದರು.

ADVERTISEMENT

ಮನೆಗಳಲ್ಲಿ ಸಣ್ಣ ಗಾತ್ರದ ಗಣೇಶಗಳನ್ನು ಪ್ರತಿಷ್ಠಾಪಿಸಿ ಹೂವು ಹಾಗೂ ವಿದ್ಯುತ್ ದೀಪಗಳಿಂದವಿಶೇಷ ಅಲಂಕಾರ ಮಾಡಲಾಗಿತ್ತು. ಕಡುಬು ಮತ್ತು ವಿವಿಧ ಹಣ್ಣುಗಳನ್ನು ನೈವೇದ್ಯಕ್ಕೆ ಇಟ್ಟು ಪೂಜೆ ಸಲ್ಲಿಸಿದರು.

ಚುನಾವಣೆಯ ವರ್ಷವಾಗಿರುವುದರಿಂದ ರಾಜಕಾರಣಿಗಳು ಸಮಾಜ ಸೇವೆಯ ಹೆಸರಿನಲ್ಲಿ ಗಾಮ್ರ ಗ್ರಾಮಗಳಿಗೂ ಉಚಿತವಾಗಿ ಗಣಪತಿಗಳನ್ನು ಉಚಿತವಾಗಿ ನೀಡಿದ್ದರು.

ವಿವಿಧ ಸಂಘಸಂಸ್ಥೆಗಳು, ಯುವಕರ ಸಂಘಗಳು ಸಾರ್ವಜನಿಕ ಸ್ಥಳಗಳಲ್ಲಿ ಪೆಂಡಾಲ್ ಹಾಕಿ ದೊಡ್ಡ ದೊಡ್ಡ ಗಣಪತಿಗಳನ್ನು ಪ್ರತಿಷ್ಠಾಪಿಸಿದ್ದರು. ಪೆಂಡಾಲ್ ಒಳಗಡೆ ಗಣಪತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ, ಪೂಜೆ ನೆರವೇರಿಸಿ ಪ್ರಸಾದವನ್ನು ವಿತರಣೆ ಮಾಡಿದರು.

ಸಂಜೆ ಜನರು ಗುಂಪು ಗುಂಪುಗಳಲ್ಲಿ ಗಣಪತಿ ದೇವಾಲಯಗಳು ಹಾಗೂ ಸಾರ್ವಜನಿಕವಾಗಿ ಗಣೇಶ ಇರುವಸ್ಥಳಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವ ದೃಶ್ಯಗಳು ಕಂಡುಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.