ADVERTISEMENT

ಕಲ್ಲಿನಿಂದ ಜಜ್ಜಿ ವ್ಯಕ್ತಿ ಹತ್ಯೆ: ದೂರು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 4:49 IST
Last Updated 2 ಡಿಸೆಂಬರ್ 2022, 4:49 IST
ಪೋಲನಾಯಕನಪಲ್ಲಿ ಶೆಟ್ಟಿಕೆರೆಯ ಪಕ್ಕದಲ್ಲಿ ನರಸಿಂಹನ ಶವವನ್ನು ಹೂತುಹಾಕಿರುವ ಸ್ಥಳಕ್ಕೆ ಜಿಲ್ಲಾ ಎಸ್‌.ಪಿ ಡಿ.ಎಲ್. ನಾಗೇಶ್, ಸರ್ಕಲ್ ಇನ್‌ಸ್ಪೆಕ್ಟರ್ ಸಿ. ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದರು
ಪೋಲನಾಯಕನಪಲ್ಲಿ ಶೆಟ್ಟಿಕೆರೆಯ ಪಕ್ಕದಲ್ಲಿ ನರಸಿಂಹನ ಶವವನ್ನು ಹೂತುಹಾಕಿರುವ ಸ್ಥಳಕ್ಕೆ ಜಿಲ್ಲಾ ಎಸ್‌.ಪಿ ಡಿ.ಎಲ್. ನಾಗೇಶ್, ಸರ್ಕಲ್ ಇನ್‌ಸ್ಪೆಕ್ಟರ್ ಸಿ. ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದರು   

ಚೇಳೂರು: ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೊಬ್ಬರನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆಗೈದು,ಪೋಲನಾಯಕನಪಲ್ಲಿಯ ಶೆಟ್ಟಿಕೆರೆಯ ಪಕ್ಕದಲ್ಲಿ ಹೂತುಹಾಕಿದ ಘಟನೆ ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ನರಸಿಂಹ(35) ಕೊಲೆಯಾದ ವ್ಯಕ್ತಿ.

ಕೊಲೆಯಾದ ವ್ಯಕ್ತಿಯ ಪತ್ನಿ ಅಲುವೇಲಮ್ಮ (25) ಅವರು, ಅಕ್ಟೋಬರ್ 27ರಂದು ತನ್ನ ಪತಿ ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು.

ADVERTISEMENT

ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು, ಆರೋಪಿಗಳಾದ ವೆಂಕಟೇಶ್ ಮತ್ತು ಶ್ರೀನಾಥ್ ಅವರನ್ನು ವಿಚಾರಣೆ ನಡೆಸಿದಾಗ, ನರಸಿಂಹನನ್ನು ತಾವೇ ಕೊಲೆಗೈದು, ಹೂತು ಹಾಕಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೃತದೇಹ ಹೂತಿಟ್ಟ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಎಸ್‌ಪಿ ಡಿ.ಎಲ್. ನಾಗೇಶ್, ಸರ್ಕಲ್ ಇನ್‌ಸ್ಪೆಕ್ಟರ್ ಸಿ. ರವಿಕುಮಾರ್, ಶವವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.ಇನ್ನು ಬಂಧಿತ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಘಟನೆಯ ಹಿನ್ನೆಲೆ: ಕೊಲೆ ಆರೋಪಿ ವೆಂಕಟೇಶ್ (25) ಅಲುವೇಲಮ್ಮ ಅವರ ಪ್ರಿಯಕರನಾಗಿದ್ದ. ನವೆಂಬರ್ 24ರಂದು ರಾತ್ರಿ ಅಲುವೇಲಮ್ಮ ಅವರ ಗಂಡ ನರಸಿಂಹನನ್ನು ವೆಂಕಟೇಶ್ ಮತ್ತು ಆತನ ಸ್ನೇಹಿತ ಶ್ರೀನಾಥ್ ಊರಿನ ವಲಯಕ್ಕೆ ಕರೆದೊಯ್ದು, ಕಂಠಪೂರ್ತಿ ಕುಡಿಸಿ, ಈ ಕೃತ್ಯವೆಸಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.