ADVERTISEMENT

ಸ್ವಚ್ಛತೆ; ನಗರಸಭೆಯೊಂದಿಗೆ ಸಹಕರಿಸಲು ಅಧ್ಯಕ್ಷ ಡಿ.ಎಸ್. ಆನಂದರೆಡ್ಡಿ ಬಾಬು ಮನವಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 3:50 IST
Last Updated 22 ಅಕ್ಟೋಬರ್ 2021, 3:50 IST
ಸ್ವಚ್ಛತೆಯ ಅರಿವು ಕಾರ್ಯಕ್ರಮಕ್ಕೆ ನಗರಸಭೆಯ ಅಧ್ಯಕ್ಷ ಆನಂದರೆಡ್ಡಿ ಚಾಲನೆ ನೀಡಿದರು. ನಗರಸಭೆ ಆರೋಗ್ಯ ಅಧಿಕಾರಿ ಶ್ರೀನಾಥ್, ಹಸಿರು ಸ್ವಯಂಸೇವಾ ಸಂಸ್ಥೆಯ ಅಧ್ಯಕ್ಷ ಮಧು, ಕಿರುಚಿತ್ರ ನಿರ್ದೇಶಕ ಮಹಾಂತೇಶ್, ಶಿಕ್ಷಕ ಮಹಾಂತೇಶ್, ಪ್ರದೀಪ್, ಪ್ರಣವ್, ರಂಜಿತ್ ಶ್ರೀನಿವಾಸರಾಜು, ಅನಿಲ್, ಹರ್ಷ, ದಕ್ಷಿಣ್, ಚರಣ್ , ಪ್ರಣವ್, ಸಂತೋಷ್, ಕಿಶೋರ್, ಹೇಮಂತ್ ಇದ್ದರು

ಚಿಕ್ಕಬಳ್ಳಾಪುರ: ನಗರದ ಸ್ವಚ್ಛತೆ ವಿಚಾರದಲ್ಲಿ ನಾಗರಿಕರು ನಗರಸಭೆಯ ಜತೆಗೆ ಸಹಕರಿಸಬೇಕು ಎಂದು ನಗರಸಭೆ ಅಧ್ಯಕ್ಷ ಡಿ.ಎಸ್. ಆನಂದರೆಡ್ಡಿ ಬಾಬು ಹೇಳಿದರು.

ಇಲ್ಲಿನ ವಾಪಸಂದ್ರದಲ್ಲಿ ಹಸಿರು ಸ್ವಯಂಸೇವಾ ಸಂಸ್ಥೆ, ನಗರಸಭೆ ಸಿಬ್ಬಂದಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸ್ವಚ್ಛತೆಯ ಅರಿವು ಮತ್ತು ಪ್ಲಾಸ್ಟಿಕ್ ಕಸ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರದ ಸ್ವಚ್ಛತೆ ನಗರಸಭೆಯ ಜವಾಬ್ದಾರಿ. ಜತೆಗೆ ನಾಗರಿಕರೂ ಸಹ ನಗರದ ಸ್ವಚ್ಛತೆಯ ಬಗ್ಗೆ ಅರಿವನ್ನು ಬೆಳೆಸಿಕೊಳ್ಳಬೇಕು. ಇದು ನಮ್ಮ ನಗರ. ಈ ನಗರ ಆರೋಗ್ಯವಾಗಿದ್ದರೆ ನಾವೂ ಸಹ ಚೆನ್ನಾಗಿ ಇರುತ್ತೇವೆ ಎನ್ನುವ ತಿಳಿವಳಿಕೆ ಪಡೆಯಬೇಕು
ಎಂದರು.

ADVERTISEMENT

ಎಲ್ಲೆಂದರಲ್ಲಿ ಕಸವನ್ನು ಎಸೆಯಬಾರದು. ಈ ರೀತಿಯಲ್ಲಿ ಮಾಡಿದರೆ ನಮ್ಮ ಮನೆಯನ್ನು ನಾವೇ ಅನಾರೋಗ್ಯದ ತಾಣವನ್ನಾಗಿ ಮಾಡಿದಂತೆ. ಈ ಬಗ್ಗೆ ಎಚ್ಚರವಹಿಸಬೇಕು ಎಂದರು.

ವಾಪಸಂದ್ರದ ಮಯೂರ ಬೇಕರಿಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದವರೆಗೆ ಪ್ಲಾಸ್ಟಿಕ್ ಸಂಗ್ರಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.