ಗೂಳೂರು (ಬಾಗೇಪಲ್ಲಿ): ತಾಲ್ಲೂಕಿನ ಗೂಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ₹29 ಲಕ್ಷ ವೆಚ್ಚದ 2 ನೂತನ ಶಾಲಾಕೊಠಡಿಗಳನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ಗ್ರಾಮದ ಹಿರಿಯ ಮುಖಂಡ ಎಸ್.ಎಸ್.ರಮೇಶಬಾಬು ಉದ್ಘಾಟಿಸಿದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ ಶಾಲೆಗೆ 75ನೇ ವರ್ಷಾಚರಣೆ ಸಂಭ್ರಮ ಇದೆ. ಶಿಕ್ಷಣ ಸಚಿವ ಮಧುಬಂಗಾರಪ್ಪವ ಅವರನ್ನು ಆಹ್ವಾನಿಸಲಾಗುವುದು. ಶಾಲೆಯನ್ನು ದತ್ತು ಪಡೆದಿದ್ದೇವೆ. ಶಾಲೆಗೆ ಅಗತ್ಯವಾದ ಕೊಠಡಿ, ಶೌಚಾಲಯ, ಕಾಂಪೌಂಡ್ ಸೇರಿದಂತೆ ಮೂಲಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರದ ಅನುದಾನದ ಜೊತೆಗೆ ಶಾಲೆಯ ಹಳೆ ವಿದ್ಯಾರ್ಥಿಗಳ, ದಾನಿಗಳ ನೆರವು ಪಡೆದು ಹೈಟೆಕ್ ಮಾದರಿ ಶಾಲೆ ಮಾಡಲಾಗುವುದು ಎಂದು ಶಾಸಕ ಸುಬ್ಬಾರೆಡ್ಡಿ ಹೇಳಿದರು.
ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ, ಉತ್ತಮವಾದ ವಾತಾವರಣ ಹಾಗೂ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರದಿಂದ ಹೆಚ್ಚು ಅನುದಾನ ಬಳಕೆ ಮಾಡಲಾಗುತ್ತಿದೆ. ವಸತಿ ಶಾಲೆ ಜೊತೆಗೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಸರ್ಕಾರಿ ಶಾಲೆಗಳಲ್ಲಿ ಓದಿ, ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ವಿಜ್ಞಾನದ ಪ್ರಯೋಗಾಲಯವನ್ನು ಉದ್ಘಾಟಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ, ಶಿಕ್ಷಣ ಅಧಿಕಾರಿ ಎನ್.ಶಿವಪ್ಪ, ರವಿಕುಮಾರ್, ಪಿಡಿಒ ಕೃಷ್ಣಮೂರ್ತಿ, ಎಸ್.ಎಸ್.ರಮೇಶಬಾಬು, ಬಾಬುರೆಡ್ಡಿ, ಹುಬ್ಬಳಿಬೈಯ್ಯಪ್ಪ, ಶ್ವೇತಾ, ವೆಂಕಟೇಶ್, ವೆಂಕಟರವಣಪ್ಪ, ಪಿ.ಎನ್.ಭಾಸ್ಕರರೆಡ್ಡಿ, ಇನಾಯತ್, ಸುಧಾಕರರೆಡ್ಡಿ, ಜಿ.ಎನ್.ನಾಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.