ADVERTISEMENT

ಬಾಗೇಪಲ್ಲಿ: ರೈತರ ಧರಣಿ ಅಂತ್ಯ

ಉಪವಿಭಾಗಾಧಿಕಾರಿ ರಘುನಂದನ್ ಭರವಸೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 2:23 IST
Last Updated 20 ಡಿಸೆಂಬರ್ 2021, 2:23 IST
ಬಾಗೇಪಲ್ಲಿ ತಾಲ್ಲೂಕು ಕಚೇರಿ ಮುಂದೆ ಹಮ್ಮಿಕೊಂಡಿರುವ ರೈತರ ಧರಣಿ ಸ್ಥಳಕ್ಕೆ ಉಪವಿಭಾಗಾಧಿಕಾರಿ ರಘುನಂದನ್ ಬಂದು ದಲಿತ ಸಂಘರ್ಷ ಸಮಿತಿಯ ಮುಖಂಡರಿಂದ ಮನವಿ ಪತ್ರ ಸ್ವೀಕರಿಸಿದರು
ಬಾಗೇಪಲ್ಲಿ ತಾಲ್ಲೂಕು ಕಚೇರಿ ಮುಂದೆ ಹಮ್ಮಿಕೊಂಡಿರುವ ರೈತರ ಧರಣಿ ಸ್ಥಳಕ್ಕೆ ಉಪವಿಭಾಗಾಧಿಕಾರಿ ರಘುನಂದನ್ ಬಂದು ದಲಿತ ಸಂಘರ್ಷ ಸಮಿತಿಯ ಮುಖಂಡರಿಂದ ಮನವಿ ಪತ್ರ ಸ್ವೀಕರಿಸಿದರು   

ಬಾಗೇಪಲ್ಲಿ: ಜಿಲ್ಲಾ ಉಪವಿಭಾಗಾಧಿಕಾರಿ ರಘುನಂದನ್ ಅವರು ರೈತರಿಗೆ ನೀಡಿದ ಭರವಸೆ ಮೇರೆಗೆ ತಾಲ್ಲೂಕು ಕಚೇರಿ ಮುಂದೆ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ರೈತರು ಹಮ್ಮಿಕೊಂಡಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಭಾನುವಾರ ಅಂತ್ಯಗೊಂಡಿತು.

ತಾಲ್ಲೂಕಿನ ದಲಿತ ರೈತರ ಜಮೀನುಗಳನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವವರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲು ಮಾಡಬೇಕು. ಜಮೀನುಗಳನ್ನು ಪುನಃ ರೈತರ ಹೆಸರುಗಳಿಗೆ ಖಾತೆ ಮಾಡಿಸಬೇಕು ಎಂದು ತಾಲ್ಲೂಕು ಕಚೇರಿ ಮುಂದೆ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ರೈತರು ಹಮ್ಮಿಕೊಂಡಿರುವಅನಿರ್ದಿಷ್ಟ ಧರಣಿ ಸತ್ಯಾಗ್ರಹ ಭಾನುವಾರಕ್ಕೆ 7ನೇ ದಿನಕ್ಕೆ ಕಾಲಿಟ್ಟಿತ್ತು.

ಜಿಲ್ಲಾ ಉಪವಿಭಾಗಾಧಿಕಾರಿ ರಘುನಂದನ್, ತಹಶೀಲ್ದಾರ್ ಡಿ.ಎ.ದಿವಾಕರ್ ಭಾನುವಾರ ಬೆಳಿಗ್ಗೆ ಪ್ರತಿಭಟನಾ ಸ್ಥಳಕ್ಕೆ ಬಂದರು. ದಲಿತ ಮುಖಂಡರುಹಾಗೂ ರೈತರಿಂದ ಮನವಿ ಪತ್ರ ಸ್ವೀಕರಿಸಿದರು. ನಂತರ ಮಾತನಾಡಿ, ‘ರೈತರ ಜಮೀನುಗಳನ್ನು ಪುನಃ ಖಾತೆಗಳಿಗೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

‘7 ದಿನಗಳಿಂದ ರೈತರು, ದಲಿತ ಸಂಘರ್ಷ ಸಮಿತಿಯ ಮುಖಂಡರು ತಾಲ್ಲೂಕು ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡಿದ್ದಾರೆ. ರೈತರ ಜಮೀನುಗಳನ್ನು ಖಾತೆ ಮಾಡಿಕೊಂಡಿರುವ ಬಗ್ಗೆ 4 ದಿನಗಳ ಒಳಗೆ ಸ್ಥಳ ಪರಿಶೀಲನೆ ಮಾಡಬೇಕು. ಅಧಿಕಾರಿಗಳಿಂದ ಸಂಪೂರ್ಣ ವರದಿ ಪಡೆದು, ನನಗೆ ನೀಡುತ್ತಾರೆ. ನಂತರ ಸಮಕ್ಷಮದಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮಾಡಲಾಗುವುದು. ನಂತರ ಎಷ್ಟೇ ಪ್ರಭಾವಿ ವ್ಯಕ್ತಿಗಳು ಆದರೂ, ರೈತರ ಜಮೀನುಗಳನ್ನು ಅವರವರ
ಖಾತೆಗಳಿಗೆ ಪುನಃ ಖಾತೆಗಳನ್ನು ಮಾಡಿಸುತ್ತೇನೆ. ನನ್ನ ಮೇಲೆ ಸಂಪೂರ್ಣವಾಗಿ ವಿಶ್ವಾಸ ಇಡಿ. ರೈತರಿಗೆ ಜಮೀನುಗಳನ್ನು ನೀಡಿಯೇ ತೀರುತ್ತೇನೆ. ಕೂಡಲೇ ರೈತರು, ಮುಖಂಡರು ಪ್ರತಿಭಟನೆ ವಾಪಸ್ ಪಡೆಯಬೇಕು’ ಎಂದು ರಘುನಂದನ್ ಮನವಿ ಮಾಡಿದರು.

‘ಉಪವಿಭಾಗಾಧಿಕಾರಿಯವರು ಸ್ಥಳಕ್ಕೆ ಆಗಮಿಸಿ, ಜಮೀನುಗಳನ್ನು ರೈತರಿಗೆ ವಾಪಸ್ ನೀಡುತ್ತಾರೆ ಎಂಬ ಭರವಸೆ ನೀಡಿದ್ದಾರೆ. ಅಧಿಕಾರಿಗಳಿಗೆ ಗೌರವ ನೀಡಿ ರೈತರ ಧರಣಿ ಸತ್ಯಾಗ್ರಹ ವಾಪಸ್ ಪಡೆಯಲಾಗುವುದು’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬಿ.ವಿ.ವೆಂಕಟರವಣ ಪ್ರಕಟಿಸಿದರು.

ದಲಿತ ಸಂಘರ್ಷ ಸಮಿತಿ ತಾಲ್ಲೂಕು ಮುಖಂಡರಾದ ಗಂಗುಲಪ್ಪ, ಎಲ್.ಎನ್.ನರಸಿಂಹಯ್ಯ, ಕೋಟಪ್ಪ, ಎಚ್.ಎನ್.ಗೋಪಿ, ಡಿ.ಕೆ.ರಮೇಶ್, ಪಿ.ನಾಗಪ್ಪ, ಎಂ.ವಿ.ನರಸಿಂಹಪ್ಪ, ಗಂಗಾಧರ್, ಗಂಗಾಧರ್, ಪ್ರಕಾಶ್, ಸೂರ್ಯನಾರಾಯಣ, ಮಂಜುನಾಥ್, ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.