ADVERTISEMENT

ನೆಲಗಡಲೆ ಮೂಟೆ ಕಳವು ಆರೋಪ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 3:13 IST
Last Updated 11 ಜುಲೈ 2025, 3:13 IST

ಪಾತಪಾಳ್ಯ(ಬಾಗೇಪಲ್ಲಿ): ತಾಲ್ಲೂಕಿನ ಪಾತಪಾಳ್ಯ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಸಂಗ್ರಹಿಸಿದ್ದ ನೆಲಗಡಲೆ ಮೂಟೆಗಳನ್ನು ಕೆಲವರು ಏಕಾಏಕಿ ದಾಳಿ ಮಾಡಿ ಅಧಿಕಾರಿಗಳ ಸಮ್ಮುಖದಲ್ಲಿ ಮೂಟೆಗಳನ್ನು ಹೊತ್ತುಕೊಂಡು ಹೋಗಿದ್ದಾರೆ. ಇದರಿಂದ ಅರ್ಹ ಫಲಾನುಭವಿ ರೈತರಿಗೆ ನೆಲಗಡಲೆ ಮೂಟೆಗಳು ಸಿಕ್ಕಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕೆಂದು ರಾಜ್ಯ ರೈತ ಸಂಘ (ಎಚ್.ಆರ್.ಬಸವರಾಜಪ್ಪ ಬಣ)ದ ತಾಲ್ಲೂಕು ಅಧ್ಯಕ್ಷ ಎಂ.ಎಸ್.ನರಸಿಂಹಾರೆಡ್ಡಿ ಒತ್ತಾಯಿಸಿದರು.

ಅರ್ಹ ರೈತರಿಂದ ಅಗತ್ಯ ದಾಖಲೆ ಪಡೆದು ನೆಲಗಡಲೆ ಮೂಟೆಗಳನ್ನು ವಿತರಣೆ ಮಾಡುವ ಸಂದರ್ಭದಲ್ಲಿ ಜನಪ್ರತಿನಿಧಿಗಳ ಬೆಂಬಲಿಗರೆಂದು ಹೇಳಿಕೊಂಡು ಕೆಲವರು ಮೂಟೆ ಕದ್ದಿದ್ದಾರೆ ಎಂದು ಆರೋಪಿಸಿದರು.

ಕೂಡಲೇ ಅನಧಿಕೃತವಾಗಿ ನೆಲಗಡಲೆ ಮೂಟೆಗಳನ್ನು ಹೊತ್ತು ಸಾಗಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅರ್ಹ ರೈತ ಫಲಾನುಭವಿಗಳಿಗೆ ಅಗತ್ಯ ಇರುವಷ್ಟು ನೆಲಗಡಲೆ ಮೂಟೆಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.