ಬಾಗೇಪಲ್ಲಿ: ತಾಲ್ಲೂಕಿನ 5, 8 ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸೋಮವಾರ ಮೌಲ್ಯಂಕನ ಪರೀಕ್ಷೆಯನ್ನು ಆರಂಭವಾಯಿತು.
ತಾಲ್ಲೂಕಿನಲ್ಲಿ ಮೌಲ್ಯಾಂಕನ ಪರೀಕ್ಷೆಯ ಮೊದಲ ದಿನ ಕನ್ನಡ ಪ್ರಥಮಭಾಷೆ ಪರೀಕ್ಷೆ ನಡೆಯಿತು. ತಾಲ್ಲೂಕಿನಲ್ಲಿ ಒಟ್ಟಾರೆಯಾಗಿ 384 ಪರೀಕ್ಷಾ ಮೌಲ್ಯಾಂಕನ ಕೇಂದ್ರಗಳು ಮಾಡಲಾಗಿದೆ. 5, 8 ಹಾಗೂ9 ನೇ ತರಗತಿಯ ವಿದ್ಯಾರ್ಥಿಗಳ ಪೈಕಿ 7257 ಮಕ್ಕಳು ನೊಂದಣಿ ಮಾಡಿಸಿದ್ದು, 7,161 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದಾರೆ.
ತಾಲ್ಲೂಕಿನಲ್ಲಿ 5ನೇ ತರಗತಿಯಲ್ಲಿ 2,416 ಮಕ್ಕಳು ಪರೀಕ್ಷೆಗೆ ನೋಂದಣಿ ಮಾಡಿದವರ ಪೈಕಿ, 2,400 ಮಕ್ಕಳು ಪರೀಕ್ಷೆಗೆ ಹಾಜರಾದರು. 8ನೇ ತರಗತಿಯಲ್ಲಿ 2,379 ಮಕ್ಕಳು ಪರೀಕ್ಷೆಗೆ ನೋಂದಣಿ ಮಾಡಿದವರ ಪೈಕಿ, 2,351 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದಾರೆ. ಉಳಿದಂತೆ 9 ನೇ ತರಗತಿಯಲ್ಲಿ 2,461 ಮಕ್ಕಳು ನೋಂದಣಿ ಮಾಡಿದವರ ಪೈಕಿ, 2,410 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದಾರೆ.
ಯಾವುದೇ ಗೊಂದಲಗಳು ಇಲ್ಲದೇ ವಿದ್ಯಾರ್ಥಿಗಳು ಮೌಲ್ಯಾಂಕನ ಪರೀಕ್ಷೆ ಬರೆದಿದ್ದಾರೆ ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ತನುಜಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.