ಶಿಡ್ಲಘಟ್ಟ: ತಾಲ್ಲೂಕಿನ ಮಾರಪ್ಪನಹಳ್ಳಿ ಗ್ರಾಮದ ರಸ್ತೆ ಬದಿಯಲ್ಲಿದ್ದ ನೂರಾರು ವರ್ಷ ಹಳೆ ಕಾಲದ ಆಲದಮರ ಗುರುವಾರ ಸಂಜೆ ಉರುಳಿ ಬಿದ್ದಿದೆ.
ಮೂರು ಮನೆಗಳು ಸೇರಿದಂತೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಕ್ಕೆ ಸಣ್ಣ ಪುಟ್ಟ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಗ್ರಾಮದ ಮುನಿವೆಂಕಟರಾಮಯ್ಯ, ವೆಂಕಟೇಶ್ ಹಾಗೂ ಮುನೇಗೌಡರಿಗೆ ಸೇರಿದ ಮನೆ ಮೇಲೆ ಕೊಂಬೆ ಬಿದ್ದು ಸಣ್ಣಪುಟ್ಟ ಹಾನಿಯಾಗಿದೆ.
ಸಂಜೆ 5 ಗಂಟೆ ಸುಮಾರಿಗೆ ಮರಗಳು ಬಿದ್ದಿದ್ದು ಇನ್ನೊಂದು ತಾಸು ತಡವಾಗಿದ್ದರೆ ಗ್ರಾಮದ ಬಹುತೇಕರು ಹಾಲು ಡೈರಿಯ ಬಳಿ ಹಾಲು ಹಾಕಲು ಬರುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.