ಚಿಕ್ಕಬಳ್ಳಾಪುರ: ಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ ನಂದಿಗಿರಿಧಾಮದ ಸುತ್ತ ಕಾಂಗ್ರೆಸ್ ಬಾವುಟಗಳು, ಫ್ಲೆಕ್ಸ್ ಗಳು, ಬ್ಯಾನರ್ ಗಳ ಅಬ್ಬರ ಜೋರಾಗಿದೆ.
ನಂದಿ ಗ್ರಾಮದಿಂದ ಬೆಟ್ಟದ ಕ್ರಾಸ್ ವರೆಗೆ 10 ಕಿ.ಮೀ ದೂರವಿದೆ. ರಸ್ತೆಯ ಎರಡೂ ಬದಿಗಳಲ್ಲಿ ಅಡಿಗಡಿಗೂ ಸಚಿವರ ಪ್ಲೆಕ್ಸ್ ಬ್ಯಾನರ್ ಗಳಿವೆ. ಹಾದಿಯುದ್ದಕ್ಕೂ ಕಾಂಗ್ರೆಸ್ ಬಾವುಟಗಳನ್ನು ಕಟ್ಟಲಾಗಿದೆ.
ದೇವನಹಳ್ಳಿಯಿಂದ ಕಾರಹಳ್ಳಿ ಕ್ರಾಸ್‌ಗೆ ಸಾಗುವ ರಸ್ತೆಯಲ್ಲಿಯೂ ಇದೇ ಚಿತ್ರಣವಿದೆ.
ಸ್ಥಳೀಯ ರಾಜಕೀಯ ನಾಯಕರು ಪೈಪೋಟಿಗೆ ಬಿದ್ದಂತೆ ವಿವಿಧ ಸಚಿವರಿಗೆ ಶುಭಕೋರಿ ಫ್ಲೆಕ್ಸ್ ಗಳನ್ನು ಅಳವಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.