ADVERTISEMENT

ಗೌರಿಬಿದನೂರು: ನಗರಗೆರೆಯಲ್ಲಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 2:50 IST
Last Updated 30 ಮಾರ್ಚ್ 2021, 2:50 IST
ನಗರಗೆರೆಯಲ್ಲಿ ನಡೆದ ಖಾದ್ರಿ ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವ
ನಗರಗೆರೆಯಲ್ಲಿ ನಡೆದ ಖಾದ್ರಿ ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವ   

ಗೌರಿಬಿದನೂರು: ತಾಲ್ಲೂಕಿನ ನಗರಗೆರೆ ಗ್ರಾಮದಲ್ಲಿ ಅನಾದಿಕಾಲದಿಂದಲೂ ನೆಲೆಸಿರುವ ಖಾದ್ರಿ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ಸೋಮವಾರ ಪ್ರಧಾನ ಆರ್ಚಕರಾದ ಎನ್.ವಿ. ಅಶ್ವತ್ಥನಾರಾಯಣಾಚಾರ್ ನೇತೃತ್ವದಲ್ಲಿ ನಡೆಯಿತು.

ಪ್ರತಿ ವರ್ಷ ಹೋಳಿ ಹುಣ್ಣಿಮೆ ಮುಗಿದ ಬಳಿಕ ನಡೆಯುವ ಈ ದೇವರ ಕಾರ್ಯಕ್ಕೆ ಗ್ರಾಮದ ಸುತ್ತಮುತ್ತ ಇರುವ ನೂರಾರು ಭಕ್ತರು ಭಾಗವಹಿಸಿ ರಥಕ್ಕೆ ಬಾಳೆಹಣ್ಣು ಮತ್ತು ದವನ ಎಸೆದು ತಮ್ಮ ಹರಕೆ ತೀರಿಸಿಕೊಳ್ಳಲು ಮುಗಿಬಿದ್ದರು.

ಗ್ರಾಮೀಣ ಭಾಗದಲ್ಲಿ ನಡೆಯುವ ಜಾತ್ರೆಗಳು ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಜನರನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಶ್ರದ್ಧಾ ಭಕ್ತಿಯಿಂದ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಜನರಿಗೆ ಮಾನಸಿಕವಾಗಿ ನೆಮ್ಮದಿ ದೊರಕುತ್ತದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನಸ್ವಾಮಿ ಹೇಳಿದರು.

ADVERTISEMENT

ಮುಜರಾಯಿ ಇಲಾಖೆಯ ಗ್ರಾಮ ಕಂದಾಯ ಅಧಿಕಾರಿ ಚೌಡಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ಮಂಜುನಾಥರೆಡ್ಡಿ, ಕಾರ್ಯದರ್ಶಿ ಜಿ.ಇ.ಶಿವಶಂಕರಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮೀನಾರಾಯಣ, ಶಿವಲಿಂಗಪ್ಪ, ರವೀಂದ್ರರೆಡ್ಡಿ, ಗೌರಮ್ಮ, ಕುಳ್ಳಾಯಮ್ಮ, ಮುಖಂಡರಾದ ಎಂ.ಎಸ್.ಲಕ್ಷ್ಮೀನಾರಾಯಣ ಶಾಸ್ತ್ರಿ, ಕೆ.ನಾಗಭೂಷಣರಾವ್, ಓಬಳೇಶಪ್ಪ, ಶಿವಪ್ಪ, ಪೆನ್ನಪ್ಪ, ಎಂ.ಗಂಗರಾಜ್, ಆದಿನಾರಾಯಣಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.