ADVERTISEMENT

₹60 ಲಕ್ಷ ಮೌಲ್ಯದ ರಕ್ತಚಂದನ ವಶ

ಚಿಕ್ಕಬಳ್ಳಾಪುರ ಹಾಗೂ ಆಂಧ್ರಪ್ರದೇಶದ ಚಿತ್ತೂರು ಪೊಲೀಸರ ಜಂಟಿ ಕಾರ್ಯಾಚರಣೆ, ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 17:09 IST
Last Updated 9 ಡಿಸೆಂಬರ್ 2018, 17:09 IST
ಪೊಲೀಸರು ವಶಪಡಿಸಿಕೊಂಡಿರುವ ರಕ್ತಚಂದನ ಕಟ್ಟಿಗೆ ತುಂಡುಗಳು
ಪೊಲೀಸರು ವಶಪಡಿಸಿಕೊಂಡಿರುವ ರಕ್ತಚಂದನ ಕಟ್ಟಿಗೆ ತುಂಡುಗಳು   

ಚಿಕ್ಕಬಳ್ಳಾಪುರ: ನೆರೆಯ ಆಂಧ್ರಪ್ರದೇಶ ದಿಂದ ರಾಜ್ಯಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು ₹60 ಲಕ್ಷ ಮೌಲ್ಯದ 13 ಟನ್ ರಕ್ತ ಚಂದನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಶನಿವಾರ ಮಧ್ಯಾಹ್ನ ರಕ್ತ ಚಂದನ ಸಾಗಿಸುತ್ತಿದ್ದ ಲಾರಿಯನ್ನು ಬೆನ್ನತ್ತಿದ್ದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಎಸ್.ಬಿ.ಎಸ್‌ ಸೆಲ್‌ನ ಡಿವೈಎಸ್‌ಪಿ ವಿ.ವಿ. ಗಿರೀಶ್ ನೇತೃತ್ವದ ತಂಡದೊಂದಿಗೆ ಚಿಕ್ಕಬಳ್ಳಾಪುರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

ಲಾರಿ ರಾಷ್ಟ್ರೀಯ ಹೆದ್ದಾರಿ-7 ರಲ್ಲಿ ಗುಡಿಬಂಡೆಯಿಂದ ಗೌರಿಬಿದನೂರು ಮಾರ್ಗವಾಗಿ ಚಿಕ್ಕಬಳ್ಳಾಪುರದ ಕಡೆಗೆ ಹೋಗುತ್ತಿರುವುದರ ಮಾಹಿತಿ ಪಡೆದ ಪೊಲೀಸರು, ನಗರದ ಹೊರ ವಲಯದ ಗೌರಿಬಿದನೂರು ರಸ್ತೆಯ ಕಣಿವೆ ಪ್ರದೇಶದ ವೀರದಿಮ್ಮನ ದೇವಾಲಯದ ಬಳಿ ದಾಳಿ ನಡೆಸಿ ವಶಕ್ಕೆ ಪಡೆದರು.

ಲಾರಿಯಲ್ಲಿದ್ದ ವೇಣುಗೋಪಾಲ್ (32), ರಾಮಚಂದ್ರ (32) ಅವರನ್ನು ಬಂಧಿಸಲಾಗಿದೆ.

ಲಾರಿಯಲ್ಲಿ 42 ರಕ್ತ ಚಂದನದ ತುಂಡುಗಳಿದ್ದವು. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.