ಚಿಕ್ಕಬಳ್ಳಾಪುರ: ಸರ್ಕಾರವು 2024–29ನೇ ಪ್ರವಾಸೋದ್ಯಮ ನೀತಿಯ ಅಡಿಯಲ್ಲಿ ಜಿಲ್ಲಾವಾರು ಪ್ರವಾಸಿ ತಾಣಗಳಿಗೆ ಅನುಮೋದನೆ ನೀಡಿದೆ. ಆ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 95 ತಾಣಗಳಿಗೆ ಪ್ರವಾಸಿ ತಾಣಗಳ ಮುದ್ರೆ ಬಿದ್ದಿದೆ.
ಈ ಹಿಂದೆ ಜಿಲ್ಲೆಯಲ್ಲಿ 72 ಪ್ರವಾಸಿ ತಾಣಗಳನ್ನು ಗುರುತಿಸಲಾಗಿತ್ತು. ಈಗ ಹೊಸ ನೀತಿಯ ಅಡಿ 95 ಸ್ಥಳಗಳನ್ನು ಗುರುತಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಸಂಖ್ಯೆ ಹೆಚ್ಚಿದೆ. ಹೊಸದಾಗಿ 23 ತಾಣಗಳು ಪ್ರವಾಸಿಸ್ಥಳಗಳು ಎನಿಸಿವೆ.
ಸರ್ಕಾರವು ಕರ್ನಾಟಕ ಪ್ರವಾಸೋದ್ಯಮ ನೀತಿ 2024–29ಕ್ಕೆ ಅನುಮೋದನೆ ನೀಡಿದೆ. ಹೀಗಾಗಿ ಹಿಂದಿನ ನೀತಿಗೆ ಸಂಬಂಧಿಸಿದ ಸರ್ಕಾರದ ಎಲ್ಲಾ ಆದೇಶಗಳು ಅನೂರ್ಜಿತವಾಗುತ್ತವೆ ಎಂದು ಸರ್ಕಾರ ತಿಳಿಸಿದೆ
ಆದ್ದರಿಂದ ಪ್ರವಾಸೋದ್ಯಮ ಇಲಾಖೆಯಿಂದ ನೂತನ ಪ್ರವಾಸಿ ತಾಣಗಳನ್ನು ಗುರುತಿಸಲು ಕ್ರಮವಹಿಸಲಾಗಿತ್ತು. ಜಿಲ್ಲೆಗಳಿಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಮತ್ತು ಹೆಚ್ಚು ಪ್ರವಾಸಿಗರು ಭೆಟಿ ನೀಡುವ ಪ್ರಮುಖ ಪ್ರವಾಸಿ ತಾಣಗಳನ್ನು ಆದ್ಯತಾವಾರು ಪಟ್ಟಿ ಮಾಡಲಾಗಿತ್ತು.
ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಅವರಿಂದ ಆಯಾ ಜಿಲ್ಲೆಗಳ ಪ್ರವಾಸಿ ತಾಣಗಳ ಮಾಹಿತಿ ಪಡೆಯಲಾಗಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಏಪ್ರಿಲ್ ತಿಂಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯು 95 ಪ್ರವಾಸಿ ತಾಣಗಳನ್ನು ಗುರುತಿಸಿ ಪ್ರಸ್ತಾವ ಸಲ್ಲಿಸಿತ್ತು. ಈ ಸ್ಥಳಗಳಿಗೆ ಪ್ರವಾಸಿಗರ ಭೇಟಿಯ ಅಂಕಿ ಸಂಖ್ಯೆಯ ವಿವರ ಹಾಗೂ ಚಿತ್ರಗಳನ್ನು ಸಲ್ಲಿಸಲಾಗಿತ್ತು. ಈಗ ಈ ಎಲ್ಲ ತಾಣಗಳಿಗೂ ಪ್ರವಾಸಿ ತಾಣಗಳ ಮುದ್ರೆ ಬಿದ್ದಿದೆ.
ಯಾವ ತಾಲ್ಲೂಕಿನಲ್ಲಿ ಯಾವ ಸ್ಥಳ ಪ್ರವಾಸಿ ತಾಣ: ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಗಿರಿಧಾಮ, ಟಿಪ್ಪು ಬೇಸಿಗೆ ಅರಮನೆ, ನಂದಿ ಗ್ರಾಮದ ಭೋಗ ನಂದೀಶ್ವರ ದೇವಾಲಯ, ಸರ್.ಎಂ.ವಿಶ್ವೇಶ್ವರಯ್ಯ ಮನೆ ಮತ್ತು ಸಮಾಧಿ, ರಂಗಸ್ಥಳ, ಬ್ರಿಟಿಷರ ಸ್ಮಾರಕ, ಕಣಿವೆ ಬಸವಣ್ಣ, ಸ್ಕಂದಗಿರಿ, ಆವುಲಬೆಟ್ಟ, ಗೋವರ್ಧನಗಿರಿ, ಶ್ರೀನಿವಾಸಸಾಗರ, ಹೈದರ್ ಬೆಟ್ಟ (ಗುಳ್ಳಕಾಯಿ ಬೆಟ್ಟ), ಜಾಲಾರಿ ನರಸಿಂಹಸ್ವಾಮಿ ಬೆಟ್ಟ, ಕೇತಬೈರವೇಶ್ವರ ಬೆಟ್ಟ, ಹರಿಹರಪುರ ಬೆಟ್ಟ, ನಂದಿಯ ಹಜರತ್ ಜಹಂಗೀರ್ ಷಾ ವಲಿ ದರ್ಗಾ, ಜಕ್ಕಲಮಡಗು ಜಲಾಶಯ, ಸೂಲಾಲಪ್ಪನದಿನ್ನೆಯ ವೀರಾಂಜನೇಯ ಸ್ವಾಮಿ ದೇವಾಲಯ, ಈಶಾ ಫೌಂಡೇಶನ್, ಕೇತೇನಹಳ್ಳಿ ಪಾಲ್ಸ್, ಕೋಟೆ ಬೆಟ್ಟ, ಸಂಗಮೇಶ್ವರ ದೇವಾಲಯ, ಪಾಪಾಘ್ನಿ ಮಠ.
ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥ, ವಾಟದಹೊಸಹಳ್ಳಿ ಕೆರೆ, ಹುಸೇನ್ ಷಾ ವಲಿ ದರ್ಗಾ, ಹೊಸೂರಿನ ಎಚ್.ನರಸಿಂಹಯ್ಯ ಅವರ ಹುಟ್ಟೂರು ಹಾಗೂ ಸಮಾಧಿ ಸ್ಥಳ, ಚನ್ನಸೋಮೇಶ್ವರಸ್ವಾಮಿ ದೇವಾಲಯ, ಎಚ್.ಎನ್.ವಿಜ್ಞಾನ ಕೇಂದ್ರ, ಮುದುಗಾನಕುಂಟೆಯ ಗಂಗಾಭಾಗೀರಥಿ ದೇವಾಲಯ.
ಮಂಚೇನಹಳ್ಳಿ ತಾಲ್ಲೂಕಿನ ಮಹೇಶ್ವರಮ್ಮ ಕ್ಷೇತ್ರ, ದಂಡಿಗಾನಹಳ್ಳಿ ಕೆರೆ, ಕೋಡಿ ಬ್ರಹ್ಮದೇವ ಜಿನಾಲಯ, ಬ್ರಹ್ಮಗಿರಿ ಬೆಟ್ಟ, ಮಂಚೇನಹಳ್ಳಿ ಕೊಡಗೀಕೆರೆ.
ಬಾಗೇಪಲ್ಲಿ ತಾಲ್ಲೂಕಿನ ಗುಮ್ಮನಾಯಕನಪಾಳ್ಯ ಕೋಟೆ, ದೇವಿಕುಂಟೆ ಕೋಟೆ, ಸ್ತಂಭ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ, ಆದಿ ನಾರಾಯಣಸ್ವಾಮಿ ಬೆಟ್ಟ, ಚಿತ್ರಾವತಿ ಜಲಾಶಯ, ಗಡಿದಂ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯ, ಗರುಡಾದ್ರಿ ಲಕ್ಷ್ಮಿನರಸಿಂಹಸ್ವಾಮಿ, ಸುಂಕಲಮ್ಮ ದೇವಾಲಯ, ಮಲ್ಲಸಂದ್ರ ರಸ್ತೆಯ ಶನಿಮಹಾತ್ಮ ದೇವಾಲಯ, ನಿಡುಮಾಮಿಡಿ ಮಠ, ಜಡಲಬೈರವೇಶ್ವರ ದೇವಾಲಯ, ಹುಸೇನ್ ದಾಸರ ದರ್ಗಾ, ಜಡಮಡಗು ಜಲಪಾತ.
ಚಿಂತಾಮಣಿ ತಾಲ್ಲೂಕಿನ ಅಭಯ ಆಂಜನೇಯಸ್ವಾಮಿ ದೇವಾಲಯ ಹಾಗೂ ದರ್ಗಾ, ಮುತ್ತುರಾಯಸ್ವಾಮಿ ದೇವಾಲಯ, ಮುರುಗಮಲ್ಲ, ಯೋಗಿ ನಾರೇಯಣ ಮಠ, ಅಮರ ನಾರೇಯಣ ದೇವಾಲಯ, ಭೀಮೇಶ್ವರ ನಕುಲೇಶ್ವರ ದೇವಾಲಯ, ಕೈವಾರ ದುರ್ಗಿ ಬೆಟ್ಟ, ಕೈವಾರ ತಾತಯ್ಯ ಗವಿಮಠ, ತಪೋವನ ಕೈವಾರ, ಅಂಬಾಜಿದುರ್ಗ ಕೋಟೆ, ಗಂಗಮ್ಮ ದೇವಾಲಯ ನಾರಸಿಂಹಪೇಟೆ, ರೆಹಮನ್ ಫಡ್ ಕೋಟೆ, ವೀರನಾರಾಯಣಸ್ವಾಮಿ ದೇವಾಲಯ, ಯಗವಕೋಟೆ, ಮುಕ್ತೀಶ್ವರ ಬೆಟ್ಟ, ಮುರುಗಮಲೆ ಬೆಟ್ಟ, ಕೈಲಾಸಗಿರಿ ಗುಹಾಂತ ದೇವಾಲಯ, ಹಜರತ್ ಸೈಯದ್ ಜಲಾಲ್ ದರ್ಗಾ, ಕಾಡುಮಲ್ಲೇಶ್ವರ ದೇವಾಲಯ, ಆಲಂಬಗಿರಿ ವೆಂಕಟರಮಣಸ್ವಾಮಿ ದೇವಾಲಯ, ವೀರಾಂಜನೇಯಸ್ವಾಮಿ ದೇವಾಲಯ, ಕನ್ನಿಕಾ ಪರಮೇಶ್ವರಿ ದೇವಾಲಯ, ಕೋನಕುಂಟ್ಲು ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯ.
ಗುಡಿಬಂಡೆ ತಾಲ್ಲೂಕಿನ ಎಲ್ಲೋಡು ಆದಿನಾರಾಯಣಸ್ವಾಮಿ ಬೆಟ್ಟ, ಅಹೋಬಲ ನರಸಿಂಹಸ್ವಾಮಿ ದೇವಾಲಯ, ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯ, ಅಮಾನಿಬೈರಸಾಗರ ಕೆರೆ, ಸುರಸದ್ಮಗಿರಿ ಬೆಟ್ಟ, ವರ್ಲಕೊಂಡ, ಚಂದ್ರನಾಥ ಬಸದಿ, ದೊಡ್ಡ ಬಸದಿ, ಸೋಮೇಶ್ವರ ದೇವಾಲಯ.
ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟ, ಬ್ಯಾಟರಾಯಸ್ವಾಮಿ ದೇವಸ್ಥಾನ, ರಾಮಸಮುದ್ರಕೆರೆ, ರಾಮಲಿಂಗೇಶ್ವರ ದೇವಾಲಯ, ಒಡೆಯನ ಕೆರೆ, ಸಾದಲಮ್ಮನ ದೇವಾಲಯ, ವರದಾಂಜನೇಯ ಗುಡಿ, ಗಂಗಮ್ಮ ದೇವಾಲಯ.
ಚೇಳೂರು ತಾಲ್ಲೂಕಿನ ಗಡಿಗವಾರಹಳ್ಳಿ ತಿರುಮಲಾಪುರದ ಪ್ರಹ್ಲಾದ ಸಮೇತ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ, ಗಂಗಾಭವಾನಿ ದೇವಾಲಯ, ಕೊಂಡಿಕೊಂಡ ಗಂಗಮ್ಮ ದೇವಾಲಯ, ಭೀಮಲಿಂಗೇಶ್ವರ ಸ್ವಾಮಿ ದೇವಾಲಯ, ವೀರಭದ್ರಸ್ವಾಮಿ ದೇವಾಲಯ, ಆದಿ ತಿರುಪತಿ ವೆಂಕಟರಮಣಸ್ವಾಮಿ ದೇವಾಲಯ.
‘ಹೆಚ್ಚಿನ ಅನುದಾನಕ್ಕೆ ಅವಕಾಶ’
ಒಂದೇ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ತಾಣಗಳು ಇದ್ದರೆ ಅವುಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ದೊರೆಯುವ ಅವಕಾಶಗಳು ಇವೆ. ಆ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಯಶವಂತ್ ‘ಪ್ರಜಾವಾಣಿ’ಗೆ ತಿಳಿಸಿದರು. ಮಾಸಿಕ ವಾರ್ಷಿಕವಾಗಿ ಹೆಚ್ಚು ಜನರು ಭೇಟಿ ನೀಡುವ 95 ತಾಣಗಳನ್ನು ಗುರುತಿಸಿ ಅವುಗಳನ್ನು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಮೂಲಕ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಈ ಹಿಂದೆ ಜಿಲ್ಲೆಯಲ್ಲಿ 72 ಪ್ರವಾಸಿ ತಾಣಗಳು ಇದ್ದವು. ಇನ್ನೂ ಕೆಲವು ಪ್ರವಾಸಿ ಸ್ಥಳಗಳು ಇವೆ. ಅವುಗಳನ್ನು ಮುಂದಿನ ವರ್ಷಗಳಿಗೆ ಪಟ್ಟಿಗೆ ಸೇರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.