ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಅಂತೂ ಬಂತು ಚಿಮುಲ್ ವೆಬ್‌ಸೈಟ್

ವರ್ಷದಾಟಿದರೂ ಚಿಮುಲ್‌ಗಿಲ್ಲ ವೆಬ್‌ಸೈಟ್– ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿತ್ತು ವರದಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 5:18 IST
Last Updated 4 ಡಿಸೆಂಬರ್ 2025, 5:18 IST
ಚಿಮುಲ್ ವೆಬ್‌ಸೈಟ್ ಮುಖಪುಟ
ಚಿಮುಲ್ ವೆಬ್‌ಸೈಟ್ ಮುಖಪುಟ   

ಚಿಕ್ಕಬಳ್ಳಾಪುರ: ಕೊನೆಗೂ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ (ಚಿಮುಲ್) ವೆಬ್‌ಸೈಟ್ ರಚನೆಯಾಗಿದೆ. ಈ ಮೂಲಕ ಅಂತರ್ಜಾಲದಲ್ಲಿಯೂ ಚಿಮುಲ್ ತನ್ನ ಬಗ್ಗೆ ಮಾಹಿತಿಯನ್ನು ಅಡಕಗೊಳಿಸಿದೆ.

ಚಿಮುಲ್ ಅಸ್ತಿತ್ವಕ್ಕೆ ಬಂದು ಒಂದು ವರ್ಷ ದಾಟಿದೆ. ಆದರೆ ಇಂದಿಗೂ ಚಿಮುಲ್‌ಗೆ ತನ್ನದೇ ಆದ ವೆಬ್‌ಸೈಟ್ ಹೊಂದಲು ಸಾಧ್ಯವಾಗಿಲ್ಲ ಎಂದು ಕಳೆದ ತಿಂಗಳು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು.

ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ, ಚಿಮುಲ್ ಹಾಲು ಮತ್ತು ಹಾಲಿನ ಉತ್ಪನ್ನಗಳು ಎಂದು ವೆಬ್‌ಸೈಟ್‌ನ ಮುಖಪುಟದಲ್ಲಿ ಮಾಹಿತಿ ಇದೆ. ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಉತ್ಪನ್ನಗಳು, ಚಿಮುಲ್ ಅಸ್ತಿತ್ವದ ವಿಚಾರಗಳ ಬಗ್ಗೆ ಮಾಹಿತಿಯೂ ಇದೆ. ನಂದಿಕ್ರಾಸ್‌ನಲ್ಲಿರುವ ಒಕ್ಕೂಟದ ಕಚೇರಿಯ ಚಿತ್ರವೂ ಇದೆ.

ADVERTISEMENT

ಚಿಮುಲ್ ತನ್ನ ವೆಬ್‌ಸೈಟ್‌ನ ಮುಖಪುಟದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ, ಚಿಮುಲ್ ಹಾಲು ಮತ್ತು ಹಾಲಿನ ಉತ್ಪನ್ನಗಳು ಎಂದು ಕನ್ನಡದಲ್ಲಿ ನಮೂದಿಸಿದೆ. ಉಳಿದ ಮಾಹಿತಿಗಳು ಆಂಗ್ಲಭಾಷೆಯಲ್ಲಿವೆ.

ಫೆ.1ರಂದು ಚಿಮುಲ್ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಸಂಬಂಧಿಸಿದ ಮಾಹಿತಿಯನ್ನೂ ಜಾಲತಾಣದಲ್ಲಿ ಅಡಕಗೊಳಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.