ADVERTISEMENT

ಮಕ್ಕಳಿಗೆ ಬಹುಮಾನ ವಿತರಣೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 4:54 IST
Last Updated 27 ನವೆಂಬರ್ 2025, 4:54 IST
ಗೌರಿಬಿದನೂರಿನಲ್ಲಿ ನಡೆದ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಲಾಯಿತು
ಗೌರಿಬಿದನೂರಿನಲ್ಲಿ ನಡೆದ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಲಾಯಿತು   

ಗೌರಿಬಿದನೂರು: ನಗರದ ಡಾ.ಎಚ್.ಎನ್ ಕಲಾ ಭವನದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ನಗರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸಂವಿಧಾನ ಸಮರ್ಪಣಾ ದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಶಾಸಕ ಕೆ.ಎಚ್ ಪುಟ್ಟಸ್ವಾಮಿ ಗೌಡ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಂವಿಧಾನ ಕರಡು ಸಮಿತಿ ರಚನೆ ಮಾಡಿ ಸಂವಿಧಾನವನ್ನು ರಚನೆ ಮಾಡಿ ಅಂಗಿಕಾರ ಮಾಡಿದ ಶ್ರೇಷ್ಠ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಸಂವಿಧಾನ ಕರಡು ಸಮಿತಿಗೆ ಅಂಬೇಡ್ಕರ್ ಹೃದಯದಂತಿದ್ದರು. ಅವರು ಎಲ್ಲಾ ವಿಚಾರಗಳನ್ನು ಪರಿಶೀಲನೆ ಮಾಡಿ, ಸಂವಿಧಾನಕ್ಕೆ ಬೇಕಾದ ಅಂಶಗಳನ್ನು ತೆಗೆದುಕೊಂಡು ಸರ್ವರಿಗೂ ಸಮಪಾಲು ಸಮಬಾಳು ಎನ್ನುವ ಸಂವಿಧಾನ ರೂಪಿಸಿದರು ಎಂದರು.

ಭಾರತ ದೇಶಕ್ಕೆ ಶ್ರೇಷ್ಠ ಸಂವಿಧಾನ ರಚಿಸಿದ ಅಂಬೇಡ್ಕರ್ ಮಹಾಜ್ಞಾನಿಯಾಗಿದ್ದರು. ಅವರನ್ನು ದಲಿತ ವ್ಯಕ್ತಿ ಎಂದು ತಾತ್ಸಾರ ಮಾಡಿದ ವ್ಯಕ್ತಿಗಳೇ ಅವರ ವಿದ್ವತ್ತನ್ನು ಕಂಡು ಮಾತನಾಡಲು ಹೆದರುತ್ತಿದ್ದರು. ಅಂಬೇಡ್ಕರ್ ಪ್ರಪಂಚದಲ್ಲಿದ್ದ ಅನೇಕ ಸಂವಿಧಾನಗಳನ್ನು ಅಧ್ಯಯನ ಮಾಡಿ ನಮ್ಮ ದೇಶಕ್ಕೆ ಹೊಂದುವಂತಹ ಸಂವಿಧಾನವನ್ನು ರಚಿಸಿದ ಪ್ರಖಂಡ ಪಂಡಿತ ಎಂದರು.

ADVERTISEMENT

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಕೆ ಹೊನ್ನಯ್ಯ ಮಾತನಾಡಿ, ಸಂವಿಧಾನದ ಎಂದರೆ ಅದರ ಆತ್ಮ ಅಂಬೇಡ್ಕರ್ ಜ್ಞಾಪಕವಾಗುತ್ತಾರೆ. ಬ್ರಿಟಿಷರು ಸಂವಿಧಾನ ರಚಿಸಲು ಭಾರತೀಯರಿಗೆ ಸವಾಲು ಹಾಕಿದಾಗ ಅಂಬೇಡ್ಕರ್ ಅದನ್ನು ಮಾಡಿ ತೋರಿಸಿದರು. ಭಾರತದಂತಹ ದೇಶಕ್ಕೆ ಪ್ರಪಂಚದ ಅತೀ ದೊಡ್ಡ ಸಂವಿಧಾನ ರಚಿಸಿದರು. ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲು ಅಂಬೇಡ್ಕರ್ ಕಾರಣ ಎಂದರು.

ಮುಖ್ಯ ಭಾಷಣಕಾರ ಶಿಕ್ಷಕ ಸುಧಾಕರ್ ಸಂವಿಧಾನದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.

ನಗರಸಭೆ ಪೌರಾಯುಕ್ತ ಕೆ.ಜಿ ರಮೇಶ್, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಚನ್ನಪ್ಪ ಗೌಡ ನಾಯ್ಕರ್, ವ್ಯವಸ್ಥಾಪಕ ಅಂಜಿನಪ್ಪ, ಗಂಗರೆಡ್ಡಿ, ನರಸಿಂಹಪ್ಪ, ರವಿಕುಮಾರ್, ಆಶಾ, ವನಜಾಕ್ಷಿ, ನರಸಿಂಹಯ್ಯ, ಲಕ್ಷ್ಮಿನಾರಾಯಣಪ್ಪ, ಪ್ರಭಾಕರ್ ರೆಡ್ಡಿ, ವಿಜಯ ರಾಘವ, ಅಬ್ದುಲ್ಲಾ, ಗಂಗಾಧರಪ್ಪ, ಸತ್ಯನಾರಾಯಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.