ADVERTISEMENT

ಚಿಮುಲ್: ಯಾರಿಗೆ ಒಲಿಯುವುದು ಜಂಗಮಕೋಟೆ ಕ್ಷೇತ್ರ

ಡಿ.ಜಿ.ಮಲ್ಲಿಕಾರ್ಜುನ
Published 26 ಜನವರಿ 2026, 4:01 IST
Last Updated 26 ಜನವರಿ 2026, 4:01 IST
ಆರ್.ಶ್ರೀನಿವಾಸ್
ಆರ್.ಶ್ರೀನಿವಾಸ್   

ಶಿಡ್ಲಘಟ್ಟ: ಚಿಮುಲ್ ಅಸ್ತಿತ್ವಕ್ಕೆ ಬಂದ ನಂತರ ಶಿಡ್ಲಘಟ್ಟ ಎರಡು ಕ್ಷೇತ್ರಗಳಾಗಿ ವಿಂಗಡಣೆಗೊಂಡಿದೆ. ಜಂಗಮಕೋಟೆ ಮತ್ತು ಶಿಡ್ಲಘಟ್ಟ ಕ್ಷೇತ್ರಗಳಿಂದ ಇಬ್ಬರು ನಿರ್ದೇಶಕರನ್ನು ಆಯ್ಕೆ ಮಾಡಿ ಕಳುಹಿಸಬೇಕಿದೆ.

ಜಂಗಮಕೋಟೆ ಕ್ಷೇತ್ರದ ವ್ಯಾಪ್ತಿಗೆ ಜಂಗಮಕೋಟೆ ಹೋಬಳಿ ಮತ್ತು ಕಸಬಾ ಹೋಬಳಿಯ ಹಂಡಿಗನಾಳ, ತುಮ್ಮನಹಳ್ಳಿ, ಕೊತ್ತನೂರು, ವೈ.ಹುಣಸೇನಹಳ್ಳಿ ಪಂಚಾಯಿತಿ ಒಳಪಡುತ್ತವೆ. ಈ ಕ್ಷೇತ್ರ ವ್ಯಾಪ್ತಿಯಲ್ಲಿ 81 ಡೆಲಿಗೇಟ್ (ಮತದಾರರು) ಇದ್ದಾರೆ.

ಚಿಮುಲ್ ಆಡಳಿತ ಮಂಡಳಿ ನಿರ್ದೇಶಕ ಸ್ಥಾನದ ಚುನಾವಣೆಗೆ ಜಂಗಮಕೋಟೆ ಕ್ಷೇತ್ರದಿಂದ ಬಿಜೆಪಿ ಜೆಡಿಎಸ್‌ನ ಎನ್‌ಡಿಎ ಬೆಂಬಲಿತ ಅಭ್ಯರ್ಥಿಯಾಗಿ ಹುಜಗೂರು ಎಂ.ರಾಮಯ್ಯ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಆರ್.ಶ್ರೀನಿವಾಸ್ ಸ್ಪರ್ಧಿಸಿದ್ದಾರೆ.

ADVERTISEMENT

ಕಳೆದ ಬಾರಿ ಕೋಚಿಮುಲ್ ನಿರ್ದೇಶಕರಾಗಿದ್ದ ಆರ್.ಶ್ರೀನಿವಾಸ್ ತಮ್ಮ ಅವಧಿಯಲ್ಲಿ ಹಲವು ಅಡೆತಡೆಗಳಿದ್ದರೂ ಸಾದಲಿ ಬಳಿಯ ಜಾನುವಾರು ಆಹಾರ ಘಟಕ ಚಾಲ್ತಿಗೆ ತಂದರು. 25ಕ್ಕೂ ಹೆಚ್ಚು ಡೇರಿಗಳು ಸ್ವಂತಕಟ್ಟಡ ಹೊಂದಲು ಒಕ್ಕೂಟ ಹಾಗೂ ಕೆಎಂಎಫ್ ಅನುದಾನ ಹಾಗೂ ತಮ್ಮ ವಿಶೇಷ ಅನುದಾನ ನೀಡಿದ್ದಾರೆ. ಸಾದಲಿಯ ಶಿಥಲೀಕರಣ ಮುಚ್ಚಿದಾಗ ಅಲ್ಲಿದ್ದ ಸುಮಾರು 80ಕೆಲಸಗಾರರಿಗೆ ಉದ್ಯೋಗ ಹೋಗದಂತೆ ಹಾಲಿನ ಪುಡಿ ಪ್ಯಾಕಿಂಗ್ ಘಟಕ ಮಾಡಿರುವರು. ಅತಿ ದೊಡ್ಡ ಹಾಲು ಉತ್ಪಾದಕ ಡೇರಿ ಎಂದೇ ಹೆಸರಾದ ಮಳಮಾಚನಹಳ್ಳಿಗೆ ಸ್ವಂತ ಕಟ್ಟಡಕ್ಕಾಗಿ ₹15 ಲಕ್ಷ ಅನುದಾನ ಮತ್ತು ಜಿಲ್ಲೆಯಲ್ಲಿಯೇ ಅತಿದೊಡ್ಡ ಶಿಥಲೀಕರಣ ಕೇಂದ್ರ ಸ್ಥಾಪನೆಗೆ ಕಾರಣರಾಗಿದ್ದಾರೆ. 

ಹುಜಗೂರು ರಾಮಯ್ಯ ತಾಲ್ಲೂಕಿನ ಪ್ರಗತಿಪರ ರೈತರಾಗಿದ್ದು, ಅತ್ಯುತ್ತಮ ಕೃಷಿ ಪದ್ಧತಿಗಳಿಗಾಗಿ ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ರೈತರಾಗಿದ್ದುಕೊಂಡೇ ಸಹಕಾರಿ ಕ್ಷೇತ್ರಗಳಲ್ಲಿ ಹಲವಾರು ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ. ಎಪಿಎಂಸಿ ಮೂಲಕ ರೈತರಿಗಾಗಿ ಹಲವಾರು ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಮೊಟ್ಟ ಮೊದಲ ಬಾರಿಗೆ ಚಿಮುಲ್ ನಿರ್ದೇಶಕ ಚುನಾವಣೆ ಕಣಕ್ಕೆ ಧುಮುಕಿರುವ ಇವರು ಶಾಸಕ ಬಿ.ಎನ್.ರವಿಕುಮಾರ್ ಅವರ ಆಪ್ತರು. ರೈತರ ಕೂಗು, ಕುಂದುಕೊರತೆಗೆ ಧ್ವನಿಯಾಗಬೇಕು. ಪ್ರತಿಯೊಬ್ಬ ರೈತರೂ ಗೋಪಾಲಕರಾಗಬೇಕು. ಉಪಕಸುಬಾಗಿ ಹೈನುಗಾರಿಕೆ ರೈತರನ್ನು ಕಾಪಾಡಬಲ್ಲದು. ಸೋರಿಕೆಗಳು ಮತ್ತು ದಲ್ಲಾಳಿಗಳ ವಿರುದ್ಧ ಹೋರಾಟ ನಿರಂತರವಾಗಿರುತ್ತದೆ. ಗುಣಮಟ್ಟಕ್ಕೆ ತಕ್ಕಂತೆ ಬೆಲೆಯನ್ನು ರೈತರಿಗೆ ಕೊಡಿಸಿದಾಗ ಮಾತ್ರ ನಮ್ಮ ಆಯ್ಕೆಗೆ ಅರ್ಥ ಬರುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ಅಭ್ಯರ್ಥಿಗಳು ಸೈದ್ಧಾಂತಿಕವಾಗಿ ರೈತಪರ, ಅಭಿವೃದ್ಧಿ ಪರವಾಗಿ ಬದ್ಧರಾಗಿದ್ದರೂ, ಧ್ರುವೀಕೃತ ವಾತಾವರಣದಲ್ಲಿ ಅಭ್ಯರ್ಥಿಗಳಾಗಿ ನಾನಾ ರೀತಿಯ ಕಾರ್ಯತಂತ್ರದ ಮೂಲಕ ಮತದಾರರನ್ನು ಆಕರ್ಷಿಸುವುದು ಈ ಕಾಲದ ವಾಸ್ತವ. ಈ ಸೈದ್ಧಾಂತಿಕ ಬದ್ಧತೆ ಕೆಲವು ಮತದಾರರ ಆಯ್ಕೆಯ ಮೇಲೆ ಮಾತ್ರ ಪ್ರಭಾವ ಬೀರುತ್ತದೆ. ಒಂದೆಡೆ ಪಕ್ಷ ನಿಷ್ಠೆ, ಮತ್ತೊಂದೆಡೆ ವ್ಯಕ್ತಿ ನಿಷ್ಠೆ ಇದ್ದರೆ, ಇವೆರಡರ ನಡುವೆ ಆಮಿಷಗಳತ್ತ ವಾಲುವವರೇ ಅಧಿಕವಾಗಿದ್ದಾರೆ.

ಹುಜಗೂರು ರಾಮಯ್ಯ

ಪಕ್ಷಾತೀತವಾಗಿ ಸೇವೆ

ಕೋಚಿಮುಲ್ ನಿರ್ದೇಶಕನಾಗಿದ್ದಾಗ ಪಕ್ಷಾತೀತವಾಗಿ ಸೇವೆ ಸಲ್ಲಿಸಿದ್ದೇನೆ. ಮತದಾರರೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿದೆ. ಹಾಲು ಉತ್ಪಾದನೆ ಹೆಚ್ಚಿಸಲು ಪ್ರೋತ್ಸಾಹಧನ ಮುಂತಾದ ಪೂರಕ ಯೋಜನೆ ರೂಪಿಸುವ ಹಾಗೂ ಹೈನುಗಾರರಿಗೆ ಉಪಯುಕ್ತ ಸೇವಾಕಾರ್ಯ ಮಾಡುವ ಉದ್ದೇಶವಿದೆ ಆರ್.ಶ್ರೀನಿವಾಸ್ ಸಮಸ್ಯೆಗಳಿಗೆ ಪರಿಹಾರ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದೇ ಹೆಗ್ಗುರಿ. ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತಾಗಲು ರಾಸುಗಳಿಗೆ ಸೂಕ್ತ ಚಿಕಿತ್ಸೆ ಔಷಧೋಪಚಾರ ತ್ವರಿತವಾಗಿ ನಡೆಯಲು ಶ್ರಮಿಸುತ್ತೇನೆ. ಶಾಸಕ.ಬಿ.ಎನ್.ರವಿಕುಮಾರ್ ಕೂಡ ರೈತರ ಪರ ನಿಲುವಿದ್ದು ಅವರೊಟ್ಟಿಗೆ ಕೆಲಸ ಮಾಡಲು ಮತಯಾಚಿಸುವೆ.  ಹುಜಗೂರು ರಾಮಯ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.