ADVERTISEMENT

ಚಿಂತಾಮಣಿ: 6ನೇ ವೇತನ ಆಯೋಗ ಶಿಫಾರಸು ಜಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 14:16 IST
Last Updated 10 ಮಾರ್ಚ್ 2025, 14:16 IST
ಚಿಂತಾಮಣಿಯಲ್ಲಿ ನಿವೃತ್ತ ನೌಕರರ ಸಮಾವೇಶದಲ್ಲಿ ಭಾಗವಹಿಸಿದ್ದ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು
ಚಿಂತಾಮಣಿಯಲ್ಲಿ ನಿವೃತ್ತ ನೌಕರರ ಸಮಾವೇಶದಲ್ಲಿ ಭಾಗವಹಿಸಿದ್ದ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು   

ಚಿಂತಾಮಣಿ: ರಾಜ್ಯ ಸರ್ಕಾರಿ ನಿವೃತ್ತ ನೌಕರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏಪ್ರಿಲ್ 4 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಗಿದೆ ಎಂದು ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಈಚೆಗೆ ನಡೆದ ನಿವೃತ್ತ ನೌಕರರ ಸಮಾವೇಶದಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರವು ಯಥಾವತ್ತಾಗಿ 6ನೇ ವೇತನ ಆಯೋಗದ ವರದಿ ಒಪ್ಪಿಕೊಂಡು ಜಾರಿಗೊಳಿಸಲಾಗುವುದು ಎಂದು ತೀರ್ಮಾನ ಕೈಗೊಂಡಿದೆ. ಆದರೆ ವೇತನ ಆಯೋಗದ ಶಿಪಾರಸುಗಳನ್ನು ಎರದು ವರ್ಷವಾದರೂ ಅನುಷ್ಠಾನಗೊಳಿಸಿಲ್ಲ. ರಾಜ್ಯ ಸರ್ಕಾರಿ ನಿವೃತ್ತ ನೌಕರರಿಗೆ 70.75 ವರ್ಷಗಳು ತುಂಬಿದಾಗ ಕ್ರಮವಾಗಿ ಶೇ 10 ಮತ್ತು ಶೇ 15 ರಷ್ಟು ವೇತನ ಹೆಚ್ಚಿಸಲು ಆಯೋಗ ಶಿಪಾರಸು ಮಾಡಿದೆ. ಸರ್ಕಾರ ಹಿರಿಯ ನಿವೃತ್ತ ನೌಕರರಿಗೆ ಇಂದಿಗೂ ಸೌಲಭ್ಯ ನೀಡಿಲ್ಲ ಎಂದರು.

ADVERTISEMENT

ನಿವೃತ್ತ ನೌಕರರಿಗೆ ಶಿಪಾರಸು ಮಾಡಿದ್ದ ಆರೋಗ್ಯ ಭತ್ಯೆ, ಆರೋಗ್ಯ ಭಾಗ್ಯ, ಸಂಧ್ಯಾ ಕಿರಣ ಯೋಜನೆ, ನಿವೃತ್ತರು ನಿಧನ ಹೊಂದಿದಾಗ ಅವರ ಶವ ಸಂಸ್ದಕಾರಕ್ಕೆ ₹10 ಸಾವಿರ ನೀಡುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಸಲು ಸಮಾವೇಶದಲ್ಲಿ ಒತ್ತಾಯಿಸಲಾಗುವುದು. ಈ ಬಾರಿಯ ಬಜೇಟ್‌ನಲ್ಲಿ ನಿವೃತ್ತ ನೌಕರರಿಗೆ ಬಾರಿ ನಿರಾಶೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾವೇಶಕ್ಕೆ ಮುಖ್ಯಮಂತ್ರಿಗಳನ್ನು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಲಾಗುವುದು. ಜತೆಗೆ 2022 ರಿಂದ 2024 ರವರೆಗೆ ನಿವೃತ್ತರಾದ ನೌಕರರಿಗೆ ಆಗಿರುವ ಅನ್ಯಾಯವನ್ನು ಸಮಾವೇಶದಲ್ಲಿ ಪ್ರಸ್ತಾಪಿಸಿ, ಈಡೇರಿಸುವಂತೆ ಒತ್ತಡ ಹೇರಲಾಗುವುದು ಎಂದರು.

ನಿವೃತ್ತ ಪ್ರಾಂಶುಪಾಲೆ ಅಶ್ವತ್ಥಮ್ಮ ಮಹಿಳ ದಿನಾಚರಣೆಯ ಕುರಿತು ಉಪನ್ಯಾಸ ನೀಡಿದರು. ಸಂಘದ ಉಪಾಧಶ್ಯಕ್ಷ ಎ.ಎಸ್.ರಾಮಚಂದ್ರಮೂರ್ತಿ ಶಿವರಾತ್ರಿ ಮಹಾತ್ಮೆ ಮತ್ತು ಬಿಲ್ವಪತ್ರೆಯ ವಿಶೇಷತೆ ಕುರಿತು ಮಾತನಾಡಿದರು.  ಸಭೆಯಲ್ಲಿ ಇಬ್ಬರು ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು.

ಕೆ.ವಿ.ಚೌಡಪ್ಪ, ಜಿ.ಕೃಷ್ಣಪ್ಪ, ಹನುಮಂತಯ್ಯ, ಆಂಜಿನಪ್ಪ ಸೇರಿದಂತೆ ನಿವೃತ್ತ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.