ADVERTISEMENT

ಚಿಂತಾಮಣಿ | ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 4:40 IST
Last Updated 11 ಆಗಸ್ಟ್ 2025, 4:40 IST
   

ಚಿಂತಾಮಣಿ: ನಗರ ವ್ಯಾಪ್ತಿಯ ವೆಂಕಟಗಿರಿಕೋಟೆಯಲ್ಲಿ ಕ್ಷುಲ್ಲಕ ಕಾರಣದಿಂದ ಗುಂಪು ಶುಕ್ರವಾರ ಮನೆಗೆ ನುಗ್ಗಿ ಒಂಟಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದೆ. ಹಲ್ಲೆಗೆ ಒಳಗಾದ ಮಹಿಳೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೆಂಕಟಗಿರಿಕೋಟೆಯ ನಿವಾಸಿ ಫರಹನಾಜ್ ಬಾನು (35) ಹಲ್ಲೆಗೆ ಒಳಗಾಗಿರುವ ಮಹಿಳೆ. ಫರಹನಾಜ್ ಬಾನು ತನ್ನ ಮನೆಯಲ್ಲಿದ್ದಾಗ ವ್ಯಕ್ತಿಯೊಬ್ಬ ಏಕಾಏಕಿ ಮನೆಗೆ ನುಗ್ಗಿದ್ದಾನೆ. ಅವನ ಹಿಂದೆಯೇ ಮೂವರು ಮಹಿಳೆಯರು ನುಗ್ಗಿ ಫರಹನಾಜ್ ಮೇಲೆ ಚಾಕು ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ.

ಹಲ್ಲೆ ನಡೆಸಿರುವ ಮಹಿಳೆಯರು ಚಿಂತಾಮಣಿ ನಗರದ ಶಾಂತಿನಗರದ ನಿವಾಸಿಗಳಾದ ನಸ್ರೀನ್ ತಾಜ್, ಬತುಲ್, ನಾಝಿಮ್ ಎಂಬುವರು ಎನ್ನಲಾಗಿದೆ.

ADVERTISEMENT

ಈ ಹಿಂದೆಯೂ ಸಹ ಫರಹನಾಜ್ ಹಾಗೂ ಹಲ್ಲೆ ನಡೆಸಿರುವ ಮಹಿಳೆಯರ ನಡುವೆ ಹಣದ ವಿಚಾರದಲ್ಲಿ ವಿವಾದವಿತ್ತು. ಇದೆ ವಿಚಾರಕ್ಕೆ ಹಲ್ಲೆ ನಡೆಸಿರಬಹುದು ಎಂದು ಶಂಕಿಸಲಾಗಿದೆ.

ವಿಷಯ ತಿಳಿದ ತಕ್ಷಣ ನಗರ ಪೊಲೀಸ್ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೆ ಒಳಗಾಗಿರುವ ಮಹಿಳೆಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.