ADVERTISEMENT

ಚಿಂತಾಮಣಿ: ರಸ್ತೆ ಬದಿಗೆ ಉರುಳಿಬಿದ್ದ ಕೆಎಸ್‌ಆರ್‌ಟಿಸಿ ಬಸ್

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 14:09 IST
Last Updated 21 ಜೂನ್ 2025, 14:09 IST
ಚಿಂತಾಮಣಿಯಿಂದ ಜೂಲಪಾಳ್ಯಕ್ಕೆ ಹೋಗುತ್ತಿದ್ದ ಬಸ್ ರಸ್ತೆ ಬದಿಗೆ ಉರುಳಿಬಿದ್ದಿರುವುದು
ಚಿಂತಾಮಣಿಯಿಂದ ಜೂಲಪಾಳ್ಯಕ್ಕೆ ಹೋಗುತ್ತಿದ್ದ ಬಸ್ ರಸ್ತೆ ಬದಿಗೆ ಉರುಳಿಬಿದ್ದಿರುವುದು   

ಚಿಂತಾಮಣಿ: ಚಿಂತಾಮಣಿಯಿಂದ ಜೂಲಪಾಳ್ಯಕ್ಕೆ ತೆರಳುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಶುಕ್ರವಾರ ಪೂಲಕುಂಟ್ಲಹಳ್ಳಿಯ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಉರುಳಿಬಿದ್ದಿದೆ.

ಬಸ್ಸಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಅವರು ಗಂಜಿಗುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡು ವಾಪಸ್ ಹೋಗಿದ್ದಾರೆ.

ಪುಲಕುಂಟೆ ಬಳಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ರಸ್ತೆಗೆ ಜಲ್ಲಿ ಹರಡಲಾಗಿತ್ತು. ಬಸ್ ಜಲ್ಲಿ ಪಕ್ಕದ ಮಣ್ಣಿನ ರಸ್ತೆಯಲ್ಲಿ ಚಲಿಸುತ್ತಿದ್ದಾಗ ರಸ್ತೆ ಬದಿಗೆ ಪಲ್ಟಿ ಹೊಡೆದಿದೆ. ಮಣ್ಣಿನ ರಸ್ತೆ ಗಟ್ಟಿ ಇಲ್ಲದೆ ಒಂದು ಕಡೆಯ ಚಕ್ರಗಳು ಮಣ್ಣಿನಲ್ಲಿ ಹೂತುಹೋಗಿ 30-40 ಪ್ರಯಾಣಿಕರಿದ್ದ ಬಸ್ ಪಲ್ಟಿ ಹೊಡೆದು ರಸ್ತೆ ಬದಿಗೆ ಉರುಳಿದೆ.

ADVERTISEMENT

ಬಸ್ ಉರುಳಿದ ಕೆಲವು ಅಡಿಗಳ ಪಕ್ಕದಲ್ಲಿ ಹೈಟೆನ್ಷನ್ ವಿದ್ಯುತ್ ಸಂಪರ್ಕದ ಕಂಬವಿದ್ದು, ಕಂಬದ ಮೇಲೆ ಬಸ್ ಬಿದ್ದಿದ್ದರೆ ಬಾರಿ ಅನಾಹುತವಾಗುತ್ತಿತ್ತು. ಸ್ಥಳೀಯರು ಧಾವಿಸಿ ಜನರು ಬಸ್ಸಿನಿಂದ ಹೊರಬರಲು ಸಹಾಯ ಮಾಡಿದರು. 

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೋ ಅಧಿಕಾರಿಗಳು ಹಾಗೂ ದಿಬ್ಬೂಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.