
ಚಿಂತಾಮಣಿ: ಮಡಿವಾಳ ಮಾಚಿದೇವರ ಜಯಂತಿ ಸಂಬಂಧವಾಗಿ ತಾಲ್ಲೂಕು ಆಡಳಿತವು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಗ್ರೇಡ್ 2 ತಹಶೀಲ್ದಾರ್ ರಾಜೇಂದ್ರನ್ ನೇತೃತ್ವದಲ್ಲಿ ಮಂಗಳವಾರ ಪೂರ್ವಭಾವಿ ಸಭೆ ನಡೆಯಿತು. ಜಯಂತಿಯನ್ನು ಅದ್ದೂರಿಯಾಗಿ ಆಚರಿಸಬೇಕು ಎಂಬ ತೀರ್ಮಾನವನ್ನು ಕೈಗೊಳ್ಳಲಾಯಿತು.
ಮಡಿವಾಳ ವಿವಿಧೋದ್ದೇಶ ಸಹಕಾರ ಸಂಘದ ಕಾರ್ಯದರ್ಶಿ ಮು. ಪಾಪಣ್ಣ ಮಾತನಾಡಿ, ಈ ವರ್ಷವೂ ಎಸ್ಎಸ್ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮುದಾಯದ ಹಿರಿಯರನ್ನು ಸನ್ಮಾನಿಸಲಾಗುವುದು. ತಾಲೂಕಿನಾದ್ಯಂತ ಶಾಲೆಗಳಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ವ್ಯವಸ್ಥೆ ಮಾಡಬೇಕು ಎಂದು ಕೋರಿದರು.
ಗ್ರೇಡ್ 2 ತಹಶೀಲ್ದಾರ್ ರಾಜೇಂದ್ರ ಮಾತನಾಡಿ, ತಾಲ್ಲೂಕಿನ ಎಲ್ಲ ಶಾಲೆಗಳಲ್ಲಿ ಮಾಚಿದೇವರ ಭಾವಚಿತ್ರ ಇಟ್ಟು ಪೂಜಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು.
ಮಡಿವಾಳ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ವಿ. ರಾಮಮೂರ್ತಿ, ಮಂಜುನಾಥ್, ಸಾರಿಗೆ ಇಲಾಖೆಯ ಅಶ್ವತಪ್ಪ. ಸಮಾಜ ಇಲಾಖೆಯ ಕೃಷ್ಣಪ್ಪ, ಆನೂರು ವೆಂಕಟೇಶಪ್ಪ, ಶ್ರೀನಿವಾಸಪ್ಪ, ಕೇಬಲ್ ಕೃಷ್ಣಪ್ಪ, ಪೋಲಪೇಟೆ ನಾರಾಯಣಸ್ವಾಮಿ, ಗಂಗಾಧರ್, ಚಲಪತಿ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.