ADVERTISEMENT

ಚೇಳೂರು: ಶಿಥಿಲಾವಸ್ಥೆಯಲ್ಲಿ ಹೊಸಹುಡ್ಯ ಬಸ್‌ ತಂಗುದಾಣ

​ಪ್ರಜಾವಾಣಿ ವಾರ್ತೆ
Published 10 ಜನವರಿ 2024, 14:25 IST
Last Updated 10 ಜನವರಿ 2024, 14:25 IST
ಕುಸಿಯುವ ಹಂತಕ್ಕೆ ಬಂದಿರುವ ಹೊಸಹುಡ್ಯ ಬಸ್‌ ತಂಗುದಾಣ
ಕುಸಿಯುವ ಹಂತಕ್ಕೆ ಬಂದಿರುವ ಹೊಸಹುಡ್ಯ ಬಸ್‌ ತಂಗುದಾಣ   

ಚೇಳೂರು: ತಾಲ್ಲೂಕಿನ ಚಿಲಕಲನೇರ್ಪು ಹೋಬಳಿಯ ಹೊಸಹುಡ್ಯ ಕ್ರಾಸ್‌ನಲ್ಲಿ ಬಸ್‌ ತಂಗುದಾಣ ಸಂಪೂರ್ಣ ಶಿಥಿಲಗೊಂಡಿದೆ. 

ಚಿಂತಾಮಣಿ ಮತ್ತು ಚೇಳೂರು ಪಟ್ಟಣಗಳಿಗೆ ತೆರಳುವ ಮಾರ್ಗ ಮಧ್ಯದಲ್ಲಿರುವ ಹೊಸಹುಡ್ಯ ಕ್ರಾಸ್ ಬಳಿ ತಂಗುದಾಣವು ನಿರ್ಮಿಸಲಾಗಿದೆ. ಬಸ್‌ಗಾಗಿ ಕಾಯುವ ವೇಳೆ ಸಾರ್ವಜನಿಕರು ವಿಶ್ರಾಂತಿ ಪಡೆಯಲು ಹಲವು ವರ್ಷಗಳ ಹಿಂದೆಯೇ ಬಸ್‌ ತಂಗುದಾಣ ನಿರ್ಮಿಸಲಾಗಿದೆ. ಸದ್ಯ ಈ ನಿಲ್ದಾಣ ಸಂಪೂರ್ಣ ಶಿಥಿಲಗೊಂಡಿದೆ. 

ಇದರಿಂದಾಗಿ ಪ್ರಯಾಣಿಕರು ಜೀವಭಯದಿಂದಲೇ ಬಸ್‌ ತಂಗುದಾಣದಲ್ಲಿ ಬಸ್‌ಗಾಗಿ ಕಾಯುವ ಪರಿಸ್ಥಿತಿ ಇದೆ. ಕಲ್ಲು ಮತ್ತು ಚಪ್ಪಡಿಗಳಿಂದ ನಿರ್ಮಿಸಿರುವ ಈ ಬಸ್ ತಂಗುದಾಣದಲ್ಲಿ ಕೂರುವುದಕ್ಕೆ ಯಾವುದೇ ಆಸನಗಳು ಇಲ್ಲವಾಗಿದೆ. ಹಳೆಯದಾದ ಈ ತಂಗುದಾಣದಲ್ಲಿ ಭಯವಾಗುವ ರೀತಿಯಲ್ಲಿದೆ. ಮಳೆ ಬಂದರೂ ಸಹ ಈ ತಂಗುದಾಣಕ್ಕೆ ಯಾರು ಹೋಗುವುದಿಲ್ಲ. ತುಂಬಾ ಕಿರಿದಾಗಿರುವ ತಂಗುದಾಣದವು ಈಗಲೋ ಆಗಲೋ ಮೇಲ್ಭಾಗವು ಕುಸಿದು ಬೀಳುವ ಹಂತ ತಲುಪಿದೆ.

ADVERTISEMENT

ಸಂಬಂಧಪಟ್ಟ ಅಧಿಕಾರಿಗಳು ಅಪಘಾತ ಸಂಭವಿಸುವ ಮುಂಚೆಯೇ ಬಸ್‌ ತಂಗುದಾಣವನ್ನು ಕೆಡವಿ ಹೊಸ ತಂಗುದಾಣವನ್ನು ನಿರ್ಮಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. ಸ್ಥಳೀಯರಾದ ಮಂಜು, ಶಿವ, ಮುರಳಿ, ಸುನೀಲ್ ಮುಂತಾದವರು ಆಗ್ರಹಿಸಿದ್ದಾರೆ.

ಕುಸಿಯುವ ಹಂತಕ್ಕೆ ಬಂದಿರುವ ಹೊಸಹುಡ್ಯ ಬಸ್‌ ತಂಗುದಾಣ ..!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.