ವಂಚನೆ (ಪ್ರಾತಿನಿಧಿಕ ಚಿತ್ರ)
ಚಿಂತಾಮಣಿ: ಟೊಮೆಟೊ ವ್ಯಾಪಾರಿಯೊಬ್ಬರಿಗೆ ಹೊರ ರಾಜ್ಯದ ಖರೀದಿದಾರರು ₹48.55 ಲಕ್ಷ ನೀಡದೆ ವಂಚಿಸಿದ್ದಾರೆ ಎಂದು ನಗರ ಠಾಣೆಗೆ ದೂರು ನೀಡಲಾಗಿದೆ.
ನಗರದ ಎಪಿಎಂಸಿ ಮಾರುಕಟ್ಟೆಯ ಟೊಮೆಟೊ ವ್ಯಾಪಾರಿ ಮಹ್ಮದ್ ಶಬ್ಬೀರ್ ವುದ್ದೀನ್ ಹಣ ಕಳೆದುಕೊಂಡಿರುವ ವ್ಯಾಪಾರಿ.
ಮಹಾರಾಷ್ಟ್ರದ ಸಂಗಮ್ ನೇರ್ ನಿವಾಸಿ ಭಗವತ್ ದತ್ತು ಸುಮರ್ಲೆ, ಆರ್.ಎಂ.ಮಹೇತ್ರೆ ಬಾವುಸಾ, ನಿತಿನ್ ಮೆಹೇತ್ರೆ ಬಾವುಸಾ ಹಣ ನೀಡದೆ ವಂಚಿಸಿರುವ ಆರೋಪಿಗಳು.
‘ಭಗವತ್ ದತ್ತು ಸುಮರ್ಲೆ ಕಳೆದ 12 ವರ್ಷಗಳಿಂದ ನಮ್ಮ ಜತೆ ಕೆಲಸ ಮಾಡುತ್ತಿದ್ದನು. ಆರ್.ಎಂ.ಮೆಹೆತ್ರೆ ಬಾವುಸಾ ಅವರನ್ನು ಸ್ನೇಹಿತ ಎಂದು ಪೋನ್‌ನಲ್ಲಿ ಪರಿಚಯಿಸಿ ದೊಡ್ಡ ಟೊಮೆಟೊ ವ್ಯಾಪಾರಿ ಎಂದು ನಂಬಿಸಿದ್ದನು. ನಂತರ ಅವರ ಸೋದರ ನಿತಿನ್ ಮಹೇತ್ರೆ ಅವರ ಪರಿಚಯವಾಗಿತ್ತು. ಆರ್.ಎಂ.ಮಹೇತ್ರೆ ಹೆಸರಿನಲ್ಲಿ ನಿತಿನ್ ಮೆಹೇತ್ರೆ ₹48.55 ಲಕ್ಷ ಮೌಲ್ಯದ ಟೊಮೆಟೊ ಖರೀದಿ ಮಾಡಿದ್ದು ಹಣ ನೀಡಿಲ್ಲ ಎಂದು ವ್ಯಾಪಾರಿ ಶಬ್ಬೀರ್ ವುದ್ದೀನ್ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.