ADVERTISEMENT

ಸಿಜೆಐ ಮೇಲೆ ಶೂ ಎಸೆಯಲು ಯತ್ನ: ವಕೀಲರ ವಜಾಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 3:01 IST
Last Updated 11 ಅಕ್ಟೋಬರ್ 2025, 3:01 IST
ಬಾಗೇಪಲ್ಲಿ ತಾಲ್ಲೂಕು ಕಚೇರಿ ಮುಂದೆ ತಹಶೀಲ್ದಾರ್ ಮನೀಷಾ ಎನ್.ಪತ್ರಿಗೆ ವಕೀಲರು ಮನವಿ ಸಲ್ಲಿಸಿದರು
ಬಾಗೇಪಲ್ಲಿ ತಾಲ್ಲೂಕು ಕಚೇರಿ ಮುಂದೆ ತಹಶೀಲ್ದಾರ್ ಮನೀಷಾ ಎನ್.ಪತ್ರಿಗೆ ವಕೀಲರು ಮನವಿ ಸಲ್ಲಿಸಿದರು   

ಬಾಗೇಪಲ್ಲಿ: ಸಿಜೆಐ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್‌ನನ್ನು ವಕೀಲ ವೃತ್ತಿಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ತಾಲ್ಲೂಕು ವಕೀಲರ ಸಂಘದ ವಕೀಲರು ನ್ಯಾಯಾಲಯ ಕಲಾಪಗಳಿಂದ ಹೊರಗುಳಿದು ಪಟ್ಟಣದ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು.

ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಜೆ.ಎನ್.ಮಂಜುನಾಥ್ ಮಾತನಾಡಿ, ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆತ ಪ್ರಯತ್ನಿರುವುದು ಅಮಾನವೀಯ ಆಗಿದೆ. ಇದು ನ್ಯಾಯಾಂಗದ ವ್ಯವಸ್ಥೆಗೆ ಕಪ್ಪುಚುಕ್ಕೆ. ದ್ವೇಷವನ್ನು ದೃಷ್ಟಿಯಾಗಿರಿಸಿ ಕಾನೂನು ವಿರುದ್ಧ ನಡೆಯುವುದು ಅಪರಾಧ. ವಕೀಲ ರಾಕೇಶ್ ಕಿಶೋರ್‌ನನ್ನು ಕೂಡಲೇ ಬಂಧಿಸಬೇಕು. ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ವಕೀಲರ ಸಂಘದ ತಾಲ್ಲೂಕು ಕಾರ್ಯದರ್ಶಿ ಆರ್.ಜಯಪ್ಪ ಮಾತನಾಡಿ, ಮುಖ್ಯನ್ಯಾಯಮೂರ್ತಿಗೆ ವಕೀಲ ಅಗೌರವದ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಇದು ಸಂವಿಧಾನಕ್ಕೆ ಅವಮಾನ ಆಗಿದೆ. ವಕೀಲರನ್ನು ದೇಶದ್ರೋಹಿ ಎಂದು ಘೋಷಿಸಬೇಕು. ವಕೀಲ ವೃತ್ತಿಯಿಂದ ಶಾಶ್ವತವಾಗಿ ವಜಾ ಮಾಡಬೇಕು ಎಂದರು.

ADVERTISEMENT

ವಕೀಲರು ತಹಶೀಲ್ದಾರ್ ಮನೀಷಾ ಎನ್.ಪತ್ರಿ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಉಪಾಧ್ಯಕ್ಷ ಸಿ.ರವಿ, ಖಜಾಂಚಿ ಬಿಂದುಕುಮಾರಿ, ವಕೀಲ ನರಸಿಂಹರೆಡ್ಡಿ, ಕರುಣಾಸಾಗರ ರೆಡ್ಡಿ, ಎ.ನಂಜುಂಡಪ್ಪ, ಮುಸ್ತಾಕ್‍ಅಹಮದ್, ಮಂಜುನಾಥ್, ನಾಗಭೂಷಣ್ ನಾಯಕ್, ರಾಮಾಂಜಿ, ನರಸಿಂಹಮೂರ್ತಿ, ಬಾಲುನಾಯಕ್, ಜಿ.ಬಾಲಸರಸ್ವತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.