ADVERTISEMENT

ಚಿಕ್ಕಬಳ್ಳಾಪುರ: 41 ಹೊಸ ಕೋವಿಡ್ ಪ್ರಕರಣ, ಮೂರು ಸಾವು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 15:55 IST
Last Updated 11 ಅಕ್ಟೋಬರ್ 2020, 15:55 IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಭಾನುವಾರ ಹೊಸದಾಗಿ 41 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಮೂರು ಸೋಂಕಿತರು ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 8,753ಕ್ಕೆ ಏರಿಕೆಯಾಗಿದೆ. ಭಾನುವಾರ ಕೋವಿಡ್‌ ಆಸ್ಪತ್ರೆಯಿಂದ 70 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಈವರೆಗೆ 1,27,140 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿದ್ದು, ಆ ಪೈಕಿ 1,18,052 ಜನರ ವರದಿಗಳು ನೆಗೆಟಿವ್ ಬಂದಿವೆ.

ಸೋಂಕಿತರ ಪೈಕಿ ಈವರೆಗೆ 97 ಮಂದಿ ಮೃತಪಟ್ಟರೆ, 7,509 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ ಕೋವಿಡ್‌ ಆಸ್ಪತ್ರೆಯಲ್ಲಿ 1,147 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ತಾಲ್ಲೂಕುವಾರು ಕೋವಿಡ್‌ ಪ್ರಕರಣಗಳ ವಿವರ

ತಾಲ್ಲೂಕು;ಅಕ್ಟೋಬರ್ 11;ಒಟ್ಟು;ಬಿಡುಗಡೆ;ಒಟ್ಟು ಬಿಡುಗಡೆ;ಸಕ್ರಿಯ ಪ್ರಕರಣ;ಸಾವು

ಚಿಕ್ಕಬಳ್ಳಾಪುರ;‌2;2,745;23;2,432;275;38

ಬಾಗೇಪಲ್ಲಿ;‌1;1,175;7;951;215;9

ಚಿಂತಾಮಣಿ;‌3;1,470;14;1,282;164;24

ಗೌರಿಬಿದನೂರು;‌19;1,967;14;1,669;280;18

ಗುಡಿಬಂಡೆ;‌8;427;4;347;78;2

ಶಿಡ್ಲಘಟ್ಟ;‌8;969;8;828;135;6

ಒಟ್ಟು;‌41;8,753;70;7,509;1,147;97

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.