ಚಿಕ್ಕಬಳ್ಳಾಪುರ: ಕೊರೊನಾ ಇದೆ ಉಗುಳಬೇಡಿ ಎಂದಿದ್ದಕ್ಕೆ ತಾಲ್ಲೂಕಿನ ಚದುಲಪುರದ ಬಳಿ ಮುಳಬಾಗಿಲು ಡಿಪೊಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಕೃಷ್ಣಪ್ಪ ಅವರ ಮೇಲೆ ಇಬ್ಬರು ಯುವಕರು ಹಲ್ಲೆ ನಡೆಸಿದ್ದಾರೆ. ಈ ಬಸ್ ಮುಳಬಾಗಿಲಿನಿಂದ ಕೋಲಾರ ಮಾರ್ಗವಾಗಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿತ್ತು.
ಹಲ್ಲೆ ನಡೆಸಿದ ಕುಪ್ಪಹಳ್ಳಿ ಗ್ರಾಮದ ಚಿರಂಜೀವಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದ್ದಾರೆ. ಮತ್ತೊಬ್ಬ ಯುವಕ ಪರಾರಿ ಆಗಿದ್ದಾನೆ.
‘ಚದುಲಪುರ ಬಳಿ ಇಬ್ಬರು ಯುವಕರು ಬಸ್ ಹತ್ತಿದರು. ಅವರು ಬಾಗಿಲ ಬಳಿ ನಿಂತಿದ್ದು ಮಾಸ್ಕ್ ಧರಿಸಿರಲಿಲ್ಲ. ಪದೇ ಪದೇ ಹೊರಗೆ ಉಗುಳುತ್ತಿದ್ದರು. ಕೊರೊನಾ ಸಾಂಕ್ರಾಮಿಕ ರೋಗ ಇದೆ. ಬೇರೆಯುವರಿಗೆ ತೊಂದರೆ ಮಾಡಬೇಡಿ. ಈ ರೀತಿಯಲ್ಲಿ ಕೆಟ್ಟ ವರ್ತನೆ ಏಕೆ ಮಾಡುತ್ತಿದ್ದೀರಿ. ಒಳಗೆ ಬನ್ನಿ ಎಂದು ಹೇಳಿದೆ. ಆಗ ಈ ಇಬ್ಬರು ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದರು’ ಎಂದು ಕೃಷ್ಣಪ್ಪ ನಗರ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.