ADVERTISEMENT

30ಕ್ಕೆ ಸಿಪಿಐ(ಎಂ) ಜಿಲ್ಲಾ ಸಮ್ಮೇಳನ

ಸಾರ್ವಜನಿಕರಿಂದ ದೇಣಿಗೆ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 2:07 IST
Last Updated 26 ನವೆಂಬರ್ 2021, 2:07 IST
ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿ ಸಿಪಿಎಂ ಮುಖಂಡರು ದೇಣಿಗೆ ಸಂಗ್ರಹಿಸಿದರು
ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿ ಸಿಪಿಎಂ ಮುಖಂಡರು ದೇಣಿಗೆ ಸಂಗ್ರಹಿಸಿದರು   

ಬಾಗೇಪಲ್ಲಿ: ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಜಿಲ್ಲಾ ಸಮಿತಿಯ 17ನೇ ಸಮ್ಮೇಳನ ನ. 29 ಹಾಗೂ 30ರಂದು ನಡೆಯಲಿದ್ದು, ಇದರ ಅಂಗವಾಗಿ ಪಟ್ಟಣದ ಮುಖ್ಯರಸ್ತೆ ಸೇರಿದಂತೆ ವಿವಿಧ ವಾರ್ಡ್‍ಗಳಲ್ಲಿ ಗುರುವಾರ ಮುಖಂಡರು ದೇಣಿಗೆ ಸಂಗ್ರಹಿಸಿದರು.

ಪಟ್ಟಣದ ಸುಂದರಯ್ಯ ಭವನದಿಂದ ಹೊರಟ ಸಿಪಿಐ(ಎಂ) ಮುಖಂಡರು ಪುರಸಭೆ, ಬಸ್ ನಿಲ್ದಾಣದ ಮುಂದೆ, ಭಜನೆ ಮಂದಿರ, ಸಂತೇ ಮೈದಾನ, ಕುಂಬಾರಪೇಟೆ, ಗೂಳೂರು ರಸ್ತೆ, ಡಾ.ಎಚ್.ಎನ್. ವೃತ್ತ ಸೇರಿದಂತೆ ವಿವಿಧ ವಾರ್ಡ್‍ಗಳಲ್ಲಿ ಸಂಚರಿಸಿ ಸಮ್ಮೇಳನ ನಡೆಸಲು ಅಂಗಡಿಗಳು, ಬೀದಿ
ವ್ಯಾಪಾರಿಗಳು ಮತ್ತು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದರು.

ಸಿಪಿಐ(ಎಂ) ತಾಲ್ಲೂಕು ಕಾರ್ಯದರ್ಶಿ ಮಹಮದ್ ಅಕ್ರಂ ಮಾತನಾಡಿ, ಎರಡು ದಿನಗಳ ಕಾಲ ಪಟ್ಟಣದ ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ಪಕ್ಷದ ಜಿಲ್ಲಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ದೇಣಿಗೆ ಸಂಗ್ರಹ ಮಾಡಲಾಗಿದೆ. ಸಿಪಿಎಂ ಜನಸಾಮಾನ್ಯರು, ಕೃಷಿ ಕೂಲಿ ಕಾರ್ಮಿಕರ ಪಕ್ಷ. ಜನರೇ ಜೀವಾಳವಾಗಿದ್ದಾರೆ. ಇದರಿಂದ ಜನರಿಂದ ದೇಣಿಗೆ ಪಡೆದು ಸಮ್ಮೇಳನ ಮಾಡಲಾಗುವುದು ಎಂದು
ತಿಳಿಸಿದರು.

ADVERTISEMENT

ಒಟ್ಟು ₹ 39,777 ದೇಣಿಗೆ ಸಂಗ್ರಹವಾಗಿದೆ.ಮುಖಂಡರಾದ ಎಂ.ಪಿ. ಮುನಿವೆಂಕಟಪ್ಪ, ಪಿ. ಮಂಜುನಾಥರೆಡ್ಡಿ, ಹೇಮಚಂದ್ರ, ಸಾವಿತ್ರಮ್ಮ, ಅಶ್ವಥ್ಥಪ್ಪ, ಶ್ರೀರಾಮನಾಯಕ್, ಜಿ. ಕೃಷ್ಣಪ್ಪ, ಸಾದಿಕ್, ರಮೇಶ್, ಸೋಮಶೇಖರ್, ರಘುರಾಮರೆಡ್ಡಿ ಹಾಗೂ ಕಾರ್ಯಕರ್ತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.