ಚಿಂತಾಮಣಿ: ಚಿಂತಾಮಣಿ-ದಿಬ್ಬೂರಹಳ್ಳಿ-ಬಾಗೇಪಲ್ಲಿ ರಸ್ತೆಯ ಮಹ್ಮದ್‌ಪುರ ಗೇಟ್ ಸಮೀಪ ಸೋಮವಾರ ದ್ವಿಚಕ್ರವಾಹನಕ್ಕೆ ಕಾರು ಡಿಕ್ಕಿ ಹೊಡೆದು ದ್ವಿಚಕ್ರವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಗರದ ಡೆಕ್ಕನ್ ಆಸ್ಪತ್ರೆಯ ಬಳಿ ವಾಸವಾಗಿದ್ದ ಆರೋಗ್ಯ ಇಲಾಖೆ ನಿವೃತ್ತ ನಿರೀಕ್ಷಕ ವೆಂಕಟರವಣಪ್ಪ (66) ಮೃತಪಟ್ಟ ಸವಾರ. ಕೋಲಾರ ಜಿಲ್ಲೆಯ ಮುಳಬಾಗಿಲು ನಿವಾಸಿಯಾಗಿದ್ದ ವೆಂಕಟರವಣಪ್ಪ ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆಯಲ್ಲಿ ಮದುವೆಯಾಗಿದ್ದು ನಗರದಲ್ಲಿ ವಾಸವಾಗಿದ್ದರು.
ಸೋಮವಾರ ದ್ವಿಚಕ್ರವಾಹನದಲ್ಲಿ ನಗರದಿಂದ ಗಂಜಿಗುಂಟೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರವಾಹನ ಮಗುಚಿಬಿದ್ದಿದೆ. ಕಾರು ಚಾಲಕನ ಹಿಡಿತ ತಪ್ಪಿ ಗಿಡಗಳ ನಡುವೆ ಗುಂಡಿಯಲ್ಲಿ ಹೋಗಿ ನಿಂತಿದೆ.
ಕಾರಿನ ಚಾಲಕ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ನರಪಲ ಗ್ರಾಮದ ಆಂಜನೇಯಲು ಎಂದು ತಿಳಿದುಬಂದಿದೆ. ಅಪಘಾತವಾದ ಕೂಡಲೇ ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ. ಡಿವೈಎಸ್‌ಪಿ ಮುರಳೀಧರ್ ಮತ್ತು ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.