ADVERTISEMENT

ಚಿಕ್ಕಬಳ್ಳಾಪುರ: ಮೂರ್ತಿ ಹೊರಲು ದಲಿತರಿಗೆ ಅಡ್ಡಿ

ಗ್ರಾಮದ ಬೀದಿಯಲ್ಲಿ ಉಳಿದ ಗ್ರಾಮ ದೇವತೆಗಳ ಮೂರ್ತಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 23:00 IST
Last Updated 19 ಜನವರಿ 2026, 23:00 IST
<div class="paragraphs"><p>ಮಾರಮ್ಮ ದೇವಿ</p></div>

ಮಾರಮ್ಮ ದೇವಿ

   

(ಸಾಂದರ್ಭಿಕ ಚಿತ್ರ)

ಚಿಕ್ಕಬಳ್ಳಾಪುರ: ದೇವರ ಉತ್ಸವಮೂರ್ತಿ ಮೆರವಣಿಗೆಗೆ ಸಂಬಂಧಿಸಿದಂತೆ ತಾಲ್ಲೂಕಿನ ಆನೆಮೊಡಗು ಕೊತ್ತೂರು ಗ್ರಾಮದಲ್ಲಿ ಭಾನುವಾರ ರಾತ್ರಿ ದಲಿತರು ಮತ್ತು ಒಕ್ಕಲಿಗರ ನಡುವೆ ವಾಗ್ವಾದ ನಡೆದಿದೆ. 

ADVERTISEMENT

ಗ್ರಾಮದೇವತೆ ಮಾರಮ್ಮ ದೇವಿ ಉತ್ಸವಮೂರ್ತಿಯನ್ನು ಮೆರವಣಿಗೆ ಮಾಡಲು ಗ್ರಾಮಸ್ಥರು ಎಲ್ಲ ಜಾತಿಯ ಜನರಿಂದ ಚಂದಾ ಹಣ ವಸೂಲಿ ಮಾಡಿದ್ದರು. ಆದರೆ ಭಾನುವಾರ ರಾತ್ರಿ ಮೆರವಣಿಗೆ ವೇಳೆ ದಲಿತರು ಉತ್ಸವಮೂರ್ತಿಯನ್ನು ಹೊತ್ತುಕೊಳ್ಳಲು ಮುಂದಾಗಿದ್ದರು. ಇದನ್ನು ಒಕ್ಕಲಿಗ ಸಮುದಾಯದವರು ತಡೆದಿದ್ದರು.

ಆಗ ಎರಡೂ ಸಮುದಾಯಗಳ ನಡುವೆ ವಾಗ್ವಾದ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಇದರಿಂದಾಗಿ ಗ್ರಾಮ ದೇವತೆಯಾದ ಮಾರಮ್ಮ ಮತ್ತು ಗಂಗಮ್ಮನ ಉತ್ಸವ ಮೂರ್ತಿಗಳು ಬೀದಿಯಲ್ಲಿ ಬಿಡಲಾಗಿತ್ತು.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಸೋಮವಾರ ಪೊಲೀಸರು, ಕಂದಾಯ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಎರಡೂ ಸಮುದಾಯದವರನ್ನು ದೇವಸ್ಥಾನದ ಬಳಿ ಕರೆಯಿಸಿ ಸಂಧಾನ ನಡೆಸಿದರು. ಗ್ರಾಮದಲ್ಲಿ ಪರಿಸ್ಥಿತಿ ಸದ್ಯ ತಿಳಿಯಾಗಿದ್ದು, ಪೊಲೀಸ್ ಬಂದೋಬಸ್ತ್ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.