ಚಿಕ್ಕಬಳ್ಳಾಪುರ: ‘ಸಿದ್ದರಾಮಯ್ಯ ಯಾರನ್ನೊ ಮೆಚ್ಚಿಸಲು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ್ದಾರೆ’ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಟೀಕಿಸಿದರು.
ಚಾಮುಂಡೇಶ್ವರಿ ಗೌರವಕ್ಕೆ ಧಕ್ಕೆ ಮಾಡಬಾರದು. ಸಂಪ್ರದಾಯ ಮುರಿದರೆ ರಾಜ್ಯಕ್ಕೆ ಅಪಾಯ ಕಾದಿದೆ ಎಂದು ಎಚ್ಚರಿಸಿದರು.
‘ಬಾನು ಮುಷ್ತಾಕ್ ಅವರು ಚಾಮುಂಡಿ ತಾಯಿ ಬಳಿ ಹೋದಾಗ ‘ನನ್ನಿಂದ ತಪ್ಪಾಗಿದೆ. ದೇಶಕ್ಕೆ ಒಳ್ಳೆಯದು ಮಾಡಮ್ಮ’ ಎಂದು ಬೇಡಿಕೊಳ್ಳಲಿ. ಇಲ್ಲದಿದ್ದರೆ ದೇಶಕ್ಕೆ, ನಾಡಿಗೆ, ಸಿದ್ದರಾಮಯ್ಯ ಸೇರಿದಂತೆ ಎಲ್ಲರಿಗೂ ಗಂಡಾಂತರ ಕಾದಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.