
ಚಿಕ್ಕಬಳ್ಳಾಪುರ: ಡೀಮ್ಡ್ ಅರಣ್ಯ ವಿಸ್ತೀರ್ಣ ಪುನರ್ ಪರಿಶೀಲನೆಗೆ ನಡೆಸುತ್ತಿರುವ ಜಂಟಿ ಸಮೀಕ್ಷೆ ಶೇ70ರಷ್ಟು ಪೂರ್ಣಗೊಂಡಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಶನಿವಾರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಡೀಮ್ಡ್ ಅರಣ್ಯ ಪ್ರದೇಶ ವಿಸ್ತೀರ್ಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ಗೆ 2022ರಲ್ಲಿ ಸರ್ಕಾರ ಮಾಹಿತಿ ನೀಡಿತ್ತು. ಆ ಪ್ರಮಾಣ ಪತ್ರದಲ್ಲಿ ಲೋಪದೋಷ ಗಳಿದ್ದವು. ಅದನ್ನು ಸರಿಪಡಿಸಲು ನಡೆಸುತ್ತಿರುವ ಜಂಟಿ ಸಮೀಕ್ಷೆ ಶೇ 70ರಷ್ಟು ಪೂರ್ಣಗೊಂಡಿದೆ ಎಂದರು.
ಸರ್ಕಾರಿ ಕಟ್ಟಡ, ಪಟ್ಟಾ ಭೂಮಿಯೂ ಡೀಮ್ಡ್ ಅರಣ್ಯದ ಪಟ್ಟಿಯಲ್ಲಿವೆ. ಜಂಟಿ ಸರ್ವೆಯನ್ನು ಬೇಗ ಪೂರ್ಣಗೊಳಿಸಿ ವರದಿ ಸಲ್ಲಿಸಲು ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
2015ರ ನಂತರ ಆಗಿರುವ ಅರಣ್ಯ ಒತ್ತುವರಿ ಮತ್ತು 2015ರ ಪೂರ್ವದಲ್ಲಿ ಪಟ್ಟಾ ಜಮೀನು ಸೇರಿ 3 ಎಕರೆ
ಗಿಂತ ಹೆಚ್ಚಿನ ಅರಣ್ಯ ಭೂಮಿ ಒತ್ತುವರಿ ಆಗಿದ್ದಲ್ಲಿ ಅದ್ಯತೆ ಮೇಲೆ ತೆರವಿಗೆ ಸೂಚಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.