ADVERTISEMENT

ಗೌರಿಬಿದನೂರು: ಚಿರತೆ ದಾಳಿಗೆ ನಾಯಿ ಬಲಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 14:10 IST
Last Updated 11 ಫೆಬ್ರುವರಿ 2025, 14:10 IST
ಗೌರಿಬಿದನೂರು ತಾಲ್ಲೂಕಿನ ತಬಸಮಾಕಲ ಹಳ್ಳಿಯಲ್ಲಿ ಚಿರತೆ ಹಿಡಿಯಲು ಇಟ್ಟಿರುವ ಬೋನು
ಗೌರಿಬಿದನೂರು ತಾಲ್ಲೂಕಿನ ತಬಸಮಾಕಲ ಹಳ್ಳಿಯಲ್ಲಿ ಚಿರತೆ ಹಿಡಿಯಲು ಇಟ್ಟಿರುವ ಬೋನು   

ಗೌರಿಬಿದನೂರು: ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ತಬಸಮಾಕಲಹಳ್ಳಿ, ಗ್ರಾಮದಲ್ಲಿ ಚಿರತೆ ದಾಳಿ ನಡೆದಿದೆ.

ಸೋಮವಾರ ತಡರಾತ್ರಿ ಗ್ರಾಮಕ್ಕೆ ನುಗ್ಗಿದ ಚಿರತೆ, ಗ್ರಾಮದಲ್ಲಿನ ಬೀದಿ ನಾಯಿಯನ್ನು ಕೊಂದು ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ತಿಂದು ಹಾಕಿದೆ.

ಈ ದಾಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ವಿಷಯವನ್ನು ಗ್ರಾಮಸ್ಥರು ಅರಣ್ಯಾಧಿಕಾರಿಗೆ ತಿಳಿಸಿದ್ದು, ಉಪ ವಲಯ ಅರಣ್ಯಾಧಿಕಾರಿ ಶಿವಕುಮಾರ್ ಮತ್ತು ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಚಿರತೆ ಹಿಡಿಯಲು ಬೋನು ಇಟ್ಟಿದ್ದಾರೆ.

ADVERTISEMENT
ಗೌರಿಬಿದನೂರು ತಾಲ್ಲೂಕಿನ ತಬಸ ಮಾಕಲಹಳ್ಳಿಯಲ್ಲಿ ನಾಯಿಯನ್ನು ತಿಂದು ಹಾಕಿರುವ ಚಿರತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.