ಬಾಗೇಪಲ್ಲಿ: ಪಟ್ಟಣದ 23 ವಾರ್ಡ್‍ಗಳ ಪೈಕಿ ಶುಕ್ರವಾರ 461 ಮಂದಿ ಫಲಾನುಭವಿಗಳಿಗೆ ಇ ಖಾತೆ ವಿತರಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್ ತಿಳಿಸಿದರು.
ಪುರಸಭಾ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಇ ಖಾತಾ ಅಭಿಯಾನದಲ್ಲಿ ಫಲಾನುಭವಿಗಳಿಗೆ ಇ ಖಾತೆ ವಿತರಿಸಿ ಮಾತನಾಡಿದರು.
23 ವಾರ್ಡ್‍ಗಳಲ್ಲಿ ಈಗಾಗಲೇ ಕೆಲ ಅಂಗಡಿ, ಮನೆ ಹಾಗೂ ನಿವೇಶನಗಳ ಮಾಲೀಕರು ಇ ಖಾತೆ ಮಾಡಿಸಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಮಂದಿ ಫಲಾನುಭವಿಗಳು ಇ ಖಾತೆ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಬಾಕಿ ಉಳಿದ ಅರ್ಜಿಗಳ ಪಲಾನುಭವಿಗಳಿಗೆ ಮತ್ತೊಂದು ಸುತ್ತಿನಲ್ಲಿ ಆಗಸ್ಟ್ ಮೊದಲ ಹಾಗೂ ಎರಡನೇ ವಾರದಲ್ಲಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಸರ್ಕಾರ ಇ ಖಾತೆ ಮಾಡಿಸಲು ಒಂದು ತಿಂಗಳ ಅವಕಾಶ ನೀಡಿದೆ. ಮನೆ, ನಿವೇಶನ, ಅಂಗಡಿಗಳ ಮಾಲೀಕರಿಗೆ ಕಡ್ಡಾಯವಾಗಿ ಇ ಖಾತೆ ಅಗತ್ಯ ಇದೆ. ಈ ಖಾತೆ ಪತ್ರ ಮಾಡಿಸದಿದ್ದಲ್ಲಿ ಕೂಡಲೇ ಅರ್ಜಿ ಜೊತೆ ದಾಖಲೆ ಸಲ್ಲಿಸಬೇಕು ಎಂದು ತಿಳಿಸಿದರು.
ಪುರಸಭೆ ಉಪಾಧ್ಯಕ್ಷ ಸುಜಾತಾನಾಯ್ಡು ಮಾತನಾಡಿ, ಅರ್ಹ ಫಲಾನುಭವಿಗಳಿಗೆ ಇ ಖಾತೆಗಳನ್ನು ತ್ವರಿತವಾಗಿ ವಿತರಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಕಚೇರಿಯಲ್ಲಿ ಅಧಿಕಾರಿಗಳು, ಸಿಬ್ಬಂದಿಯವರು ಕಡಿಮೆ ಇದ್ದರೂ, ಮುಖ್ಯಾಧಿಕಾರಿ, ಕಂದಾಯ ಅಧಿಕಾರಿಗಳು ಪ್ರತಿನಿತ್ಯ ಅರ್ಜಿಗಳನ್ನು ವಿಲೇವಾರಿ ಮಾಡುತ್ತಿದ್ದಾರೆ. ಹಂತ ಹಂತದಲ್ಲಿ ಅರ್ಹ ಫಲಾನುಭವಿಗಳಿಗೆ ಇ ಖಾತೆಗಳ ವಿತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಮುಖ್ಯಾಧಿಕಾರಿ ಎಂ.ಶ್ರೀನಿವಾಸ್, ಕಂದಾಯ ಅಧಿಕಾರಿ ಅಥಾವುಲ್ಲಾ, ಲೆಕ್ಕಾಧಿಕಾರಿ ಶ್ರೀಧರ್, ಪುರಸಭಾ ಸದಸ್ಯ ಎ.ನಂಜುಂಡಪ್ಪ, ಬಿ.ಎ.ನರಸಿಂಹಮೂರ್ತಿ, ಜಬೀವುಲ್ಲಾಖಾನ್, ಕೆ.ಎನ್.ಹರೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.