ಗೌರಿಬಿದನೂರು: ನಗರಸಭೆ ಆವರಣದಲ್ಲಿ ಖಾತೆ ಅದಾಲತ್ ಗುರುವಾರ ಹಮ್ಮಿಕೊಳ್ಳಲಾಗಿತ್ತು. ಶಾಸಕ ಕೆ.ಎಚ್ ಪುಟ್ಟಸ್ವಾಮಿಗೌಡ ಫಲಾನುಭವಿಗಳಿಗೆ ಇ-ಖಾತೆ ವಿತರಣೆ ಮಾಡಿ ಮಾತನಾಡಿದರು.
ಖಾತಾ ಅದಾಲತ್‌ನಲ್ಲಿ ಈವರೆಗೆ 16 ಸಾವಿರ ಖಾತೆ ನೇರವಾಗಿ ಫಲಾನುಭವಿಗಳಿಗೆ ವಿತರಣೆ ಮಾಡಲಾಗಿದೆ. ಯಾರು ಸಹ ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಖಾತೆ ಸಕಾಲದಲ್ಲಿ ಪಡೆಯಬಹುದು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಲಕ್ಷ್ಮಿನಾರಾಯಣಪ್ಪ, ಉಪಾಧ್ಯಕ್ಷ ಫರೀದ್, ಪೌರಾಯುಕ್ತೆ ಡಿ.ಎಂ ಗೀತಾ, ಸದಸ್ಯರಾದ ಖಲೀಂಉಲ್ಲಾ, ರಾಜಕುಮಾರ್, ಡಿ.ಎ ಮಂಜುಳಾ, ಡಿ.ಜೆ.ಚಂದ್ರಮೋಹನ್, ಗೋಪಾಲ್, ಜಯರಾಮಯ್ಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.