ಗೌರಿಬಿದನೂರು: ನಗರದ ನ್ಯಾಯಾಲಯದ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ಆಡಳಿತ ಮತ್ತು ಅರಣ್ಯ ಇಲಾಖೆಯಿಂದ ಭೂಮಿ ದಿನಾಚರಣೆ ಮಂಗಳವಾರ ನಡೆಯಿತು.
ನ್ಯಾಯಾಧೀಶೆ ಗೀತಾ ಕುಂಬಾರ್ ಮಾತನಾಡಿ, ಭೂಮಿಯ ಮೇಲೆ ಹೆಚ್ಚು ಗಿಡ ಮರಗಳನ್ನು ಬೆಳೆಸಿ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ. ಹಿಂದಿನ ಕಾಲದಲ್ಲಿ ಪ್ರತಿ ಮನೆಯ ಅಂಗಳದಲ್ಲಿ ಹಣ್ಣು, ಹೂವಿನ ಗಿಡ, ತರಕಾರಿ ಬೆಳೆಸುತ್ತಿದ್ದರು. ಈಗಿನ ಜನ ಅರ್ಧ ಅಡಿ ಜಾಗಕ್ಕೂ ಜಗಳ ಮಾಡಿಕೊಂಡು ಕೋರ್ಟ್‌ಗೆ ಬರುತ್ತಾರೆ. ಗಾಳಿ, ಬೆಳಕು ಇಲ್ಲದ ಮನೆ ನಿರ್ಮಾಣ ಮಾಡಿ ನೆರಳಿಗಾಗಿ ಹುಡುಕುತ್ತಾರೆಯೇ ಹೊರತು ಗಿಡ ಬೆಳೆಸುತ್ತಿಲ್ಲ ಎಂದರು.
ವಕೀಲರ ಸಂಘದ ಅಧ್ಯಕ್ಷ ದಿನೇಶ್ ಕುಮಾರ್ ಮಾತನಾಡಿ, ಭೂಮಿ ಇಲ್ಲದಿದ್ದರೆ ಮನುಷ್ಯನ ಉಳಿವೇ ಇಲ್ಲ. ಈ ಭೂಮಿಯಲ್ಲಿ ಖಾರವಾಗಿರುವ ಮೆಣಸಿನಕಾಯಿ, ಕಹಿಯಾಗಿರುವ ಬೇವು, ಸಿಹಿಯಾಗಿರುವ ಕಬ್ಬನ್ನು ಬೆಳೆಯಬಹುದು. ಸಕಲ ಜೀವರಾಶಿಗೂ ಆಶ್ರಯ ನೀಡುವ ಭೂಮಿಯನ್ನು ರಕ್ಷಣೆ ಮಾಡುವುದು ಪ್ರತಿ ಮನುಷ್ಯನ ಕರ್ತವ್ಯ ಎಂದರು.
ನ್ಯಾಯಾಧೀಶ ಸಚಿನ್, ಪುಷ್ಪ, ಸರ್ಕಾರಿ ಅಭಿಯೋಜಕ ಫಯಾಜ್ ಪಟೇಲ್, ವಲಯ ಅರಣ್ಯ ಅಧಿಕಾರಿ ಹಂಸವಿ, ಯಲ್ಲಪ್ಪ, ವಕೀಲರ ಸಂಘದ ಕಾರ್ಯದರ್ಶಿ ಲಿಂಗಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.