ADVERTISEMENT

ಚಿಂತಾಮಣಿ: ಮಿಟ್ಟಹಳ್ಳಿ ಸುತ್ತಮುತ್ತ ಭೂಮಿ ಕಂಪಿಸಿದ ಅನುಭವ

ತಹಶೀಲ್ದಾರ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 13:33 IST
Last Updated 10 ನವೆಂಬರ್ 2021, 13:33 IST
ಚಿಂತಾಮಣಿ ತಾಲ್ಲೂಕಿನ ಮಿಟ್ಟಹಳ್ಳಿ ಗ್ರಾಮಕ್ಕೆ ತಹಶೀಲ್ದಾರ್ ಹನುಮಂತರಾಯಪ್ಪ ಹಾಗೂ ಇತರೆ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಚಿಂತಾಮಣಿ ತಾಲ್ಲೂಕಿನ ಮಿಟ್ಟಹಳ್ಳಿ ಗ್ರಾಮಕ್ಕೆ ತಹಶೀಲ್ದಾರ್ ಹನುಮಂತರಾಯಪ್ಪ ಹಾಗೂ ಇತರೆ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಚಿಂತಾಮಣಿ: ತಾಲ್ಲೂಕಿನ ಮಿಟ್ಟಹಳ್ಳಿ ಗ್ರಾಮ ಪಂಚಾಯಿತಿವ್ಯಾಪ್ತಿಯ ಸುಮಾರು 10 ಹಳ್ಳಿಗಳಲ್ಲಿ ಮಂಗಳವಾರ ರಾತ್ರಿ ಭೂಮಿ ಕಂಪಿಸಿದ ಅನುಭವವಾಗಿದೆ. ಜನರು ಭಯಭೀತರಾಗಿ ಮನೆಗಳಿಂದ ಹೊರ ಬಂದು ರಸ್ತೆಗಳಲ್ಲಿ ಕಾಲ ಕಳೆದರು.

ರಾತ್ರಿ ಸುಮಾರು 8.50ರ ಸಮಯದಲ್ಲಿ ಶಬ್ದ ಕೇಳಿಸಿತು. ಒಟ್ಟು ಮೂರು ಬಾರಿ ಶಬ್ದ ಬಂದಿದೆ. ಮನೆಯಲ್ಲಿನ ಪಾತ್ರೆ ಮತ್ತಿತರ ಸಾಮಾನುಗಳು ಅಲುಗಾಡಿವೆ. ಕೂಡಲೇ ಜನರು ಹೊರಗಡೆ ಓಡಿ ಬಂದು ಬಯಲಿನಲ್ಲಿ ಸೇರಿದ್ದಾರೆ. ಗ್ರಾಮದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಅನುಭವವಾಗಿದೆ.

ಮಿಟ್ಟಹಳ್ಳಿ, ನಂದನವನ, ಗೋನೇಪಲ್ಲಿ, ಅಪ್ಪಸಾನಹಳ್ಳಿ, ಕೊಮ್ಮೇಪಲ್ಲಿ, ಕೋಡೇಗಂಡ್ಲು, ಬಸಾಪುರ, ಅಗ್ರಹಾರ, ಅನಪ್ಪಲ್ಲಿ, ಗೌಡನಹಳ್ಳಿ, ದೊಡ್ಡಿಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಶಬ್ದ ಹಾಗೂ ಭೂಮಿ ಕಂಪಿಸಿದ ಅನುಭವವಾಗಿದೆ. ಕೆಲವು ಗ್ರಾಮಗಳಲ್ಲಿ ಜೋರಾದ ಶಬ್ದ, ಕೆಲವು ಗ್ರಾಮಗಳಲ್ಲಿ ಕಡಿಮೆ ಶಬ್ದ ಕೇಳಿಬಂದಿದೆ.

ADVERTISEMENT

ಸುದ್ದಿ ತಿಳಿದ ಕೂಡಲೇ ಕೆಂಚಾರ್ಲಹಳ್ಳಿ ಪೊಲೀಸರು, ತಹಶೀಲ್ದಾರ್ ಹನುಮಂತರಾಯಪ್ಪ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣಮೂರ್ತಿ ಗ್ರಾಮಕ್ಕೆ ಭೇಟಿ ನೀಡಿ ಜನರಿಗೆಧೈರ್ಯ ತುಂಬಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವಿಜ್ಞಾನಿಗಳನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಲಾಗುವುದು. ಜನರು ಭಯಬೀಳುವ ಅಗತ್ಯ ಇಲ್ಲ ಎಂದುಧೈರ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.