ಅಶ್ವತ್ಥನಾರಾಯಣ ಬಾಬು ಅವರ ಚಿಂತಾಮಣಿ ನಿವಾಸ
ಚಿಕ್ಕಬಳ್ಳಾಪುರ: ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ನಿರ್ದೇಶಕ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಆಪ್ತ ಅಶ್ವತ್ಥನಾರಾಯಣ ಬಾಬು ಅವರ ಚಿಂತಾಮಣಿಯ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಬೆಳಿಗ್ಗೆಯೇ ದಾಳಿ ನಡೆಸಿದ್ದಾರೆ.
ಚಿಂತಾಮಣಿ ತಾಲ್ಲೂಕಿನಿಂದ ಅಶ್ವತ್ಥನಾರಾಯಣ ಬಾಬು ಕೋಚಿಮುಲ್ ನಿರ್ದೇಶಕರಾಗಿದ್ದಾರೆ. ಎರಡು ಬಾರಿ ಪಕ್ಷೇತರರಾಗಿ (ಡಾ.ಎಂ.ಸಿ.ಸುಧಾಕರ್ ಬಣ) ಕೋಚಿಮುಲ್ ನಿರ್ದೇಶಕರಾಗಿದ್ದಾರೆ. ಸುಧಾಕರ್ ಕಾಂಗ್ರೆಸ್ ಸೇರುತ್ತಿದ್ದಂತೆಯೇ ಬಾಬು ಸಹ ಅವರನ್ನು ಹಿಂಬಾಲಿಸಿದರು. ಈ ಹಿಂದೆ ಒಮ್ಮೆ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.
ಕೋಚಿಮುಲ್ ಇತ್ತೀಚೆಗೆ ನಡೆಸಿದ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ನೇಮಕಾತಿಯ ಪಟ್ಟಿಯೊಂದು ಅಭ್ಯರ್ಥಿಗಳ ಹೆಸರು ಮತ್ತು ಅಂಕಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಬಾಬು ಕೋಚಿಮುಲ್‌ನಲ್ಲಿ ಪ್ರಭಾವಿ ನಿರ್ದೇಶಕ ಎನಿಸಿದ್ದರು. ಈ ಕಾರಣದಿಂದ ದಾಳಿ ನಡೆದಿರಬಹುದೇ ಎನ್ನುವ ಚರ್ಚೆ ಚಿಂತಾಮಣಿಯ ರಾಜಕೀಯ ವಲಯದಲ್ಲಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.