ADVERTISEMENT

ಚಿಕ್ಕಬಳ್ಳಾಪುರ: ನ್ಯಾಯಾಧೀಕರಣ ಉಚಿತ ತರಬೇತಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 5:41 IST
Last Updated 23 ಜುಲೈ 2025, 5:41 IST
<div class="paragraphs"><p>ನ್ಯಾಯ</p></div>

ನ್ಯಾಯ

   

ಚಿಕ್ಕಬಳ್ಳಾಪುರ: 2025–26ನೇ ಸಾಲಿನಲ್ಲಿ ಆಡಳಿತದ ನ್ಯಾಯಾ ಧೀಕರಣದ ಉಚಿತ ತರಬೇತಿಗೆ ಪರಿಶಿಷ್ಟ ವರ್ಗದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

ಅರ್ಜಿ ಸಲ್ಲಿಸಬಯಸುವವರು ಕಾನೂನು ಪದವೀಧರರಾಗಿದ್ದು, 18 ವರ್ಷ ಮೇಲ್ಟಟ್ಟು 40 ವರ್ಷ ಮೀರಿರಬಾರದು. ಅಭ್ಯರ್ಥಿಗಳ ವಾರ್ಷಿಕ ವರಮಾನವು ₹2 ಲಕ್ಷದ ಒಳಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರಿ ವಕೀಲರು ಅಥವಾ ಕನಿಷ್ಠ 20 ವರ್ಷ ವಕೀಲ ವೃತ್ತಿಯಲ್ಲಿ ನುರಿತ ವಕೀಲರ ಅಧೀನದಲ್ಲಿ ತರಬೇತಿಗೆ ನಿಯೋಜಿಸಲಾಗುವುದು. ತರಬೇತಿ ಪಡೆಯುವ ಅಭ್ಯರ್ಥಿಗೆ ಮಾಸಿಕ ₹10,000 ಶಿಷ್ಯ ವೇತನ ನೀಡಲಾಗುವುದು. 

ADVERTISEMENT

ಅರ್ಜಿಗಳನ್ನು https://twd.karnataka.gov.in ವೆಬ್‌ಸೈಟ್ ಮುಖಾಂತರ ಅರ್ಜಿ ಸಲ್ಲಿಸಿ, ಸ್ವೀಕೃತಿ ಅರ್ಜಿ ಪಡೆಯಬಹುದು. ಮೂಲ ದಾಖಲೆಗಳ ಪ್ರತಿಯನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ತಾಲ್ಲೂಕು ಸಹಾಯಕ ನಿರ್ದೇಶಕರು, ಚಿಕ್ಕಬಳ್ಳಾಪುರ ಸಮಾಜ ಕಲ್ಯಾಣ ಇಲಾಖೆ, ಚಿಂತಾಮಣಿ, ಬಾಗೇಪಲ್ಲಿ, ಗುಡಿಬಂಡೆ, ಶಿಡ್ಲಘಟ್ಟ ಮತ್ತು ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಗೌರಿಬಿದನೂರು ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 08156–277117ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.