ADVERTISEMENT

ಉಚಿತ ಸಾಮೂಹಿಕ ವಿವಾಹ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 16:22 IST
Last Updated 11 ಡಿಸೆಂಬರ್ 2023, 16:22 IST
ಚಿಂತಾಮಣಿಯಲ್ಲಿ ಸೋಮವಾರ ನಡೆದ ಮುಸ್ಲಿಂ ಸಮುದಾಯದ ಉಚಿತ ಸಾಮೂಹಿಕ ವಿವಾಹಗಳಲ್ಲಿ ಮದುವೆಯಾದ ನೂತನ ದಂಪತಿಗಳು ಹಾಗೂ ಭಾಗವಹಿಸಿದ್ದ ಗಣ್ಯರು.
ಚಿಂತಾಮಣಿಯಲ್ಲಿ ಸೋಮವಾರ ನಡೆದ ಮುಸ್ಲಿಂ ಸಮುದಾಯದ ಉಚಿತ ಸಾಮೂಹಿಕ ವಿವಾಹಗಳಲ್ಲಿ ಮದುವೆಯಾದ ನೂತನ ದಂಪತಿಗಳು ಹಾಗೂ ಭಾಗವಹಿಸಿದ್ದ ಗಣ್ಯರು.   

ಚಿಂತಾಮಣಿ: ನಗರದ ಹಜರತ್ ಪಾತಿಮಾ ನಿಕಾ ಕಮಿಟಿಯಿಂದ ಸೋಮವಾರ ಇಲ್ಲಿನ ಚೇಳೂರು ರಸ್ತೆಯ ಕಿಸಾನ್ ಫಂಕ್ಷನ್ ಹಾಲ್‌ನಲ್ಲಿ ಮುಸ್ಲಿಂ ಸಮುದಾಯದ ಬಡವರಿಗೆ ಉಚಿತ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಲಾಗಿತ್ತು.

ಸಾಮೂಹಿಕ ವಿವಾಹಗಳಲ್ಲಿ 24 ಜೋಡಿಗಳು ಸತಿಪತಿಯರಾಗಿ ನೂತನ ಸಂಸಾರಕ್ಕೆ ಕಾಲಿಟ್ಟರು. ವಿವಾಹಗಳಲ್ಲಿ ವಧು-ವರರಿಗೆ ಹೊಸಬಟ್ಟೆಗಳು, ವಧುವಿಗೆ ಬಂಗಾರದ ಚೈನ್, ವರನಿಗೆ ವಾಚ್‌ಗಳನ್ನು ಉಚಿತವಾಗಿ ನೀಡಲಾಗಿತ್ತು. ಮುಸ್ಲಿಂ ಸಂಪ್ರದಾಯದಂತೆ ವಿವಾಹಗಳನ್ನು ನೆರವೇರಿಸಲಾಯಿತು.

ನೂತನ ದಂಪತಿಗಳಿಗೆ ಮುಂದಿನ ಜೀವನ ನಡೆಸಲು ಅಗತ್ಯವಾದ ಬೀರು, ಮಂಚ, ಮಿಕ್ಸಿ, ಗ್ಯಾಸ್, ಸ್ಟೀಲ್ ಮತ್ತು ಪ್ಲಾಸ್ಟಿಕ್ ಪಾತ್ರೆಗಳು ಸೇರಿದಂತೆ ಅಗತ್ಯವಾದ ಎಲ್ಲ ವಸ್ತುಗಳನ್ನು ಉಚಿತವಾಗಿ ನೀಡಲಾಯಿತು.

ADVERTISEMENT

ಕಮಿಟಿಯ ಮುಖಂಡ ಅಸ್ಗರ್ ಬೈ ಮಾತನಾಡಿ ಕಮಿಟಿಯು 2012ರಿಂದಲೂ ಉಚಿತ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಂಡು ಬರುತ್ತಿದೆ. ಇದುವರೆಗೆ 147 ವಿವಾಹಗಳನ್ನು ನೆರವೇರಿಸಲಾಗಿದೆ. ಮುಸ್ಲಿಂ ಸಮುದಾಯದಲ್ಲಿ ಬಡವರು ತಮ್ಮ ಮಕ್ಕಳ ಮದುವೆಗಳನ್ನು ಮಾಡಲು ತುಂಬಾ ತೊಂದರೆ ಅನುಭವಿಸುತ್ತಾರೆ. ಬಡವರ ಕಷ್ಟಗಳಿಗೆ ಸ್ಪಂದಿಸುವ ಹಿನ್ನೆಲೆಯಲ್ಲಿ ಪ್ರತಿವರ್ಷ ಉಚಿತ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಿಕೊಂಡು ಬರಲಾಗುತ್ತಿದೆ ಎಂದರು.

ಕಮಿಟಿಯ ಪದಾಧಿಕಾರಿಗಳು, ಸಮುದಾಯದ ಮುಖಂಡರು ಹಾಗೂ ಪೋಷಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.