ಶಿಡ್ಲಘಟ್ಟ: ನಗರದ ಸಿದ್ಧಾರ್ಥನಗರದಲ್ಲಿ ಗಂಗಮ್ಮದೇವಿ ಜಾತ್ರಾ ಮಹೋತ್ಸವ ಬುಧವಾರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.
ಮಹಿಳೆಯರು ತಂಬಿಟ್ಟು ದೀಪ ಹೊತ್ತು ಊರ ಪ್ರದಕ್ಷಿಣೆ ನಡೆಸಿದರ. ಗ್ರಾಮ ದೇವತೆಗಳಾದ ಗಂಗಮ್ಮದೇವಿ, ಪೂಜಮ್ಮ ದೇವಿ, ಎಲ್ಲಮ್ಮದೇವಿ, ನಾಗಲಮುದ್ದಮ್ಮ ದೇವಿ ಹಾಗೂ ಕೋಟೆ ಸೋಮೇಶ್ವರ ಹಾಗೂ ಊರಕೆರೆ ಮುನೇಶ್ವರ ಸ್ವಾಮಿಗೆ ತಂಬಿಟ್ಟು ದೀಪದಾರತಿ ಬೆಳಗಿದರು.
ಸಿದ್ದಾರ್ಥ ನಗರದ ಎಲ್ಲೆಡೆ ವಿದ್ಯುತ್ ದೀಪಾಲಂಕಾರ, ಬಣ್ಣ ಬಣ್ಣದ ತೋರಣ, ಗ್ರಾಮದ ಪ್ರಮುಖ ರಸ್ತೆಗಳು ಶೃಂಗಾರಗೊಂಡಿದ್ದವು. ಸಿದ್ದಾರ್ಥನಗರ ಸೇರಿದಂತೆ ಸುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಮೂರು ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರಾ ಮಹೋತ್ಸವವನ್ನು ಅದ್ದೂರಿಯಿಂದ ನೆರವೇರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.