
ಪ್ರಜಾವಾಣಿ ವಾರ್ತೆ
ಚಿಂತಾಮಣಿ: ಲಿಂಗತ್ವ ಅಲ್ಪಸಂಖ್ಯಾತರ ತಂಡ ಮಂಗಳವಾರ ಓಂ ಶಕ್ತಿ ಮಾಲೆ ಧರಿಸಿ ದೀಪೋತ್ಸವ ಮಾಡಿ ಗಂಗಮ್ಮ ಮತ್ತು ಯಲ್ಲಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಗರದ ಶ್ರೀರಾಮನಗರದ ಲಿಂಗತ್ವ ಅಲ್ಪಸಂಖ್ಯಾತರಾದ ದೊಡ್ಡಮನೆ ಸೈಯದ್ ಸಲ್ಮಾ ಮನೆಯಿಂದ ಹರಕೆ ಹೊತ್ತು ತಮಿಳುನಾಡು ಶೈಲಿಯಲ್ಲಿ ಸೀರೆಯುಟ್ಟು ಮುಖಕ್ಕೆ ಅರಿಸಿನ ಹಚ್ಚಿಕೊಂಡಿದ್ದರು. ವಿಶಿಷ್ಟವಾಗಿ ಕಟ್ಟಿದ್ದ ಮಲ್ಲಿಗೆ ಹೂವಿನ ದಂಡೆಗಳಿಂದ ಅಲಂಕರಿಸಿಕೊಂಡಿದ್ದರು. ಹೂವಿನ ಕರಗ ಹೊತ್ತುಕೊಂಡು ನಗರದ ವಿವಿಧ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಸಂಗೀತ ಪ್ರಿಯಾ, ಶಿಡ್ಲಘಟ್ಟ ಅಶ್ವಿನಿ, ಬಿಂದು, ಪೂಣಂ, ಲಾರಸಿಯಾ, ತುಳಸಿ, ರಚಿತಾ, ಕುಸುಮ, ಸಿರಿ, ಗಂಗಾ, ಬೇಬಿ, ಸ್ವಿಟಿ, ಮುಸ್ಕಾನ್, ನಗಮಾ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.