
ಗೌರಿಬಿದನೂರು: ಇಲ್ಲಿನ ಕೆಎಸ್ಆರ್‌ಟಿಸಿ ಬಸ್ ಡಿಪೊ ಮುಂಭಾಗದಲ್ಲಿರುವ ಸೋಫಾಸೆಟ್ ಮಳಿಗೆಗೆ ಗುರುವಾರ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸೋಫಾ ಸೆಟ್‌ಗಳು ಆಹುತಿಯಾಗಿವೆ.
ಅಂಗಡಿಯಲ್ಲಿರುವ ನಿರುಪಯುಕ್ತ ವಸ್ತುಗಳನ್ನು ಸುಡುವಾಗ ಬೆಂಕಿಯು ಅಂಗಡಿಯಲ್ಲಿದ್ದ ವಸ್ತುಗಳಿಗೆ ತಗುಲಿದೆ. ಈ ಮಳಿಗೆಯು ನಗರಸಭೆಯಿಂದ ಪರವಾನಗಿ ಪಡೆದಿರಲಿಲ್ಲ. ಪರವಾನಗಿ ಪಡೆದಿದ್ದರೆ, ಸಾಲ ಅಥವಾ ಸರ್ಕಾರದಿಂದ ಅನುಕೂಲ ಪಡೆಯಬಹುದಿತ್ತು. ನಗರದಲ್ಲಿರುವ ಅಂಗಡಿ ಮಾಲೀಕರು ತಪ್ಪದೆ ಪರವಾನಗಿ ಪಡೆದುಕೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತ ಕೆ.ಜಿ. ರಮೇಶ್ ತಿಳಿಸಿದರು. .
ಮಾಲೀಕ ಶೌಕತ್ ಖಾನ್ ಮಾತನಾಡಿ, ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ನಿರುಪಯುಕ್ತ ವಸ್ತುಗಳನ್ನು ಮಳಿಗೆ ಹೊರಗೆ ಸುಡುತ್ತಿದ್ದರು. ಈ ಬೆಂಕಿ ಅಂಗಡಿಗೆ ವ್ಯಾಪಿಸಿದ್ದು, ಅಂಗಡಿಯಲ್ಲಿದ್ದ ₹80 ಲಕ್ಷ ಬೆಲೆ ಬಾಳುವ ಸೋಫಾಗಳು ಮತ್ತು ಒಂದು ಹೊಸ ಬುಲೆಟ್ ಆಹುತಿಯಾಗಿದೆ ಎಂದು ಅಳಲು ತೋಡಿಕೊಂಡರು.
ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.