ಗೌರಿಬಿದನೂರು: ನಗರದ ಮುನೇಶ್ವರ ಬಡಾವಣೆಯಲ್ಲಿರುವ ಲಯನ್ಸ್ ಸಂಸ್ಥೆಯಿಂದ ಬೀದಿಬದಿ ವ್ಯಾಪಾರಿಗಳಿಗೆ ಕೊಡೆ ವಿತರಣೆ ಮಾಡಲಾಯಿತು.
ಲಯನ್ಸ್ ಸಂಸ್ಥೆ ಜಿಲ್ಲಾ ಗವರ್ನರ್ ನಾರಾಯಣಸ್ವಾಮಿ, ಬೀದಿಬದಿ ವ್ಯಾಪಾರ ಮಾಡುವ 30 ಜನ ಸಣ್ಣ ವ್ಯಾಪಾರಸ್ಥರಿಗೆ ಬಿಸಿಲಿನಿಂದ ಕಾಪಾಡಿಕೊಳ್ಳಲು ಅಗಲವಾದ ಕೊಡೆಗಳನ್ನು ವಿತರಣೆ ಮಾಡಲಾಗಿದೆ. ಉಚಿತ ಕಣ್ಣಿನ ತಪಾಸಣೆ, ಮಧುಮೇಹ ತಪಾಸಣೆ, ಪರಿಸರ ಕಾಳಜಿ ಹೀಗೆ ಹಲವು ಜನಪರ ಕಾರ್ಯಗಳನ್ನು ಸಂಸ್ಥೆಯಿಂದ ನಿರಂತರವಾಗಿ ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.
ತಾಲ್ಲೂಕು ಅಧ್ಯಕ್ಷ ಸಿ.ಎನ್.ನಂಜೇಗೌಡ ಮಾತನಾಡಿ, ಬಡವರ ಪರವಾಗಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಲಯನ್ಸ್ ಸಂಸ್ಥೆ ಈ ಭಾರಿ ವ್ಯಾಪಾರಸ್ಥರಿಗೆ ಕೊಡೆ ಹಾಗೂ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಧನಸಹಾಯ ಮಾಡಲಾಗಿದೆ ಎಂದರು.
ಸಂಸ್ಥೆಯ, ಗಿರಿಜಾ ಪ್ರಸನ್ನ ಕುಮಾರ್ ಡಾ.ಗುಂಡು ರಾವ್, ಸುರಾಜ್ ರವೀಂದ್ರ, ಬಾಲಕೃಷ್ಣ, ಜಗನ್ನಾಥ, ಮಂಜುನಾಥ್, ಶ್ರೇಣಿಕ್, ಇಸ್ತೂರಿ ಸತೀಶ್, ಶ್ರೀನಿವಾಸ್, ಲಕ್ಷ್ಮೀ, ಅಂಬಿಕಾ, ಶ್ರೀರಾಮ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.