
ಗೌರಿಬಿದನೂರು: ಮಂಚೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲ್ಲೂಕು ಆಡಳಿತದಿಂದ ಸೋಮವಾರ ನಡೆದ 77ನೇ ಗಣ ರಾಜ್ಯೋತ್ಸವದ ವೇಳೆ ರಾಷ್ಟ ಧ್ವಜಕ್ಕೆ ಅಪಮಾನವಾಗಿದೆ.
ತಹಶೀಲ್ದಾರ್ ಪೂರ್ಣಿಮಾ ಧ್ವಜಾರೋಹಣ ಮಾಡುವ ವೇಳೆ ರಾಷ್ಟ್ರ ಧ್ವಜವು ತಲೆಕೆಳಗಾಗಿ ಹಾರಾಡಿದೆ. ನಂತರ ಎಚ್ಚೆತ್ತುಕೊಂಡ ಶಿಕ್ಷಕರು, ಆಡಳಿತ ಸಿಬ್ಬಂದಿ ರಾಷ್ಟ್ರ ಧ್ವಜವನ್ನು ಸರಿಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್ ಪೂರ್ಣಿಮಾ, ಗಣರಾಜ್ಯೋತ್ಸವದ ದಿನ ಧ್ವಜಾರೋಹಣ ನಡೆಯುವ ವೇಳೆ ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಿದೆ. ಈ ಕುರಿತು
ಕ್ಷಮೆಯಾಚಿಸುತ್ತೇನೆ. ಪ್ರತಿ ಜಯಂತಿ ಹಾಗೂ ರಾಷ್ಟ್ರೀಯ ಹಬ್ಬಗಳು ಮಾಡಬೇಕಾದರೆ ಪೂರ್ವಭಾವಿ ಸಭೆ ಕರೆಯುತ್ತೇವೆ. ಎಲ್ಲ ಇಲಾಖೆಗಳಿಗೆ ತಮ್ಮದೇ ಆದ ಜವಾಬ್ದಾರಿ ನೀಡಿರುತ್ತೇವೆ. ಗಣರಾಜ್ಯೋತ್ಸವ ಎರಡು ದಿನದ ಹಿಂದೆಯೂ ಕೂಡ ಪೂರ್ವಭ್ಯಾಸ ಮಾಡಲಾಗಿತ್ತು. ಆದಾಗ್ಯೂ, ಕೂಡ ಕಾರ್ಯಲೋಪ ಆಗಿದೆ. ಶಿಕ್ಷಣ ಇಲಾಖೆ ಅವರಿಗೆ ಫ್ಲಾಗ್ ಕೋಡ್ ಆಫ್ ಇಂಡಿಯಾ ಪ್ರಕಾರ ಜವಾಬ್ದಾರಿ ವಹಿಸಿದ್ದು, ಇದರಲ್ಲಿ ಅವರು ವಿಫಲರಾಗಿದ್ದಾರೆ. ನಿಯಮಾನುಸಾರ ಅವರ ಮೇಲೆ ಸೂಕ್ತ ಕ್ರಮ ವಹಿಸುತ್ತೇವೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.